News & Events
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ೨೦ನೇ ವರ್ಷದ ನವದಂಪತಿ ಸಮಾವೇಶ
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ೨೦ನೇ ವರ್ಷದ ನವದಂಪತಿ ಸಮಾವೇಶ ೧೯.೧೨.೨೦೨೧ ನೂತನವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ದಂಪತಿಗಳಿಗೆ ಆಯೋಜಿಸಿದ ಕಾರ್ಯಕ್ರಮ ನವದಂಪತಿ ಸಮಾವೇಶ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು. ಹಿರಿಯ ದಂಪತಿಗಳಾಗಿ ಭಾಗವಹಿಸಿದ ಕೃಷ್ಣಪ್ಪ ಹಾಗೂ ರಾಮಕ್ಕ ಅವರು ನವದಂಪತಿ ಸಮಾವೇಶವನ್ನು ಉದ್ಘಾಟಿಸಿ, ತಾವು ವೈವಾಹಿಕ ಜೀವನದಲ್ಲಿ ನಡೆದು ಬಂದ ಜೀವನದ ಅನುಭವವನ್ನು ನವದಂಪತಿಗಳಲ್ಲಿ ಹಂಚಿಕೊಂಡರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ||ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕ