News & Events
SARASWATHI POOJE 2026
ಸರಸ್ವತಿ ಪೂಜೆ ದಿನಾಂಕ 23.01.2026ರಂದು ಶ್ರೀರಾಮ ಮಂದಿರದ ರಾಮಾಂಗಣದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ವಾರ್ಷಿಕ ಕಾರ್ಯಕ್ರಮ ಸರಸ್ವತಿ ಪೂಜೆಯು ನಡೆಯಿತು. ಕಾರ್ಯಕ್ರಮದಲ್ಲಿ ಚಿತ್ರಾಪುರ ಮಠದ ಶ್ರೀ ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದರವರು ವಿದ್ಯಾರ್ಥಿಗಳಿಗೆ ಧರ್ಮದ ನಿಜವಾದ ವಿಚಾರಗಳನ್ನು ತಿಳಿದು ಅನುಷ್ಠಾನಗೊಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಆಶೀರ್ವಚನ ಮಾಡಿದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾಗಿರುವ ಶ್ರೀ ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು. ಕಶೆಕೋಡಿ ಶ್ರೀ
ಶೀರೂರು ಮಠದ ಪೂಜ್ಯ ಸ್ವಾಮೀಜಿಯವರು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ದಿನಾಂಕ: 31/12/25
ಶೀರೂರು ಮಠದ ಪೂಜ್ಯ ಸ್ವಾಮೀಜಿ ಶ್ರೀ ಶ್ರೀ ವೇದವರ್ಧನ ಶ್ರೀಪಾದಂಗಳವರು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದರು. ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ವಿದ್ಯಾರ್ಥಿಗಳ ದೈನಂದಿನ ಪ್ರಾರ್ಥನೆಯಾದ ಸರಸ್ವತಿ ವಂದನೆಯನ್ನು ವೀಕ್ಷಿಸಿ “ಶರೀರವು ಇರುವುದು ಪರೋಪಕಾರಕ್ಕಾಗಿ ನಾವು ಕಲಿತಿರುವ ವಿದ್ಯೆಯನ್ನು ದೇಶಕ್ಕೆ ಪ್ರೇರಕವಾಗುವಂತೆ ಮಾಡಬೇಕು, ಸಂಸ್ಕಾರ ಮತ್ತು ಗುಣಗಳಿಂದ ದೇಶವನ್ನು ಕಟ್ಟಲು ವಿದ್ಯೆ ಅಗತ್ಯವಾಗಿದೆ” ಎಂದು ವಿದ್ಯಾರ್ಥಿಗಳಿಗೆ ಆಶೀರ್ವಚನ ಮಾಡಿದರು. ವೇದಿಕೆಯಲ್ಲಿ ಪೂಜ್ಯ ಸ್ವಾಮೀಜಿಯವರ ತಂದೆಯಾದ ಶ್ರೀ ಉದಯ ಕುಮಾರ ಹಾಗೂ ತಾಯಿ ಉಪಸ್ಥಿತರಿದ್ದರು. ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾಗಿರುವ
ಶ್ರೀರಾಮ ವಿದ್ಯಾಕೇಂದ್ರಕ್ಕೆ ಅತಿಥಿಗಳ ಭೇಟಿ ದಿನಾಂಕ 25.10.2025
ಬಳ್ಳಾರಿಯ ಶ್ರೀ ಜನಾರ್ದನ ರೆಡ್ಡಿ (ಮಾನ್ಯ ಶಾಸಕರು, ಉದ್ಯಮಿಗಳು) ಮತ್ತು ಹೈದರಾಬಾದ್ ನ ಶ್ರೀ ಮಹೇಶ್ ರೆಡ್ಡಿ (ಉದ್ಯಮಿಗಳು) ಇವರು ಇಂದು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿ, ‘ಸರಸ್ವತಿ’ಗೆ ಪುಷ್ಪಾರ್ಚನೆ ಮಾಡಿ, ಶ್ರೀರಾಮ ಶಿಶು ಮಂದಿರ ಮತ್ತು ಪೂರ್ವಗುರುಕುಲ ಪುಟಾಣಿಗಳ ಚಟುವಟಿಕೆಗಳನ್ನು ವೀಕ್ಷಿಸಿದರು. ನಂತರ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ದೈನಂದಿನ ಪ್ರಾರ್ಥನೆಯಾದ ಸರಸ್ವತಿ ವಂದನದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾಗಿರುವ ಡಾ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸರಸ್ವತಿ ಮಂಟಪ ಲೋಕಾರ್ಪಣೆ – 13.10.2025
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸರಸ್ವತಿ ಮಂಟಪ ಲೋಕಾರ್ಪಣೆ – 13.10.2025 ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕ ಇಲ್ಲಿ ಸರಸ್ವತಿ ಮಂಟಪದ ಲೋಕಾರ್ಪಣೆಯು ಶೃಂಗೇರಿ ಶಾರದಾಪೀಠಾಧೀಶ್ವರರಾದ ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು, ಇವರ ದಿವ್ಯಹಸ್ತದಿಂದ ನೆರವೇರಿತು. ಶ್ರೀರಾಮ ಶಿಶುಮಂದಿರ ಹಾಗೂ ಶ್ರೀರಾಮ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ಸರಸ್ವತಿ ಮಂಟಪವನ್ನು ಪರದೆ ಸರಿಸಿ ಅನಾವರಣಗೊಳಿಸಿ ಪೂಜೆ ಸಲ್ಲಿಸಿ ಶೃಂಗೇರಿ ಶಾರದಾಪೀಠಾಧೀಶ್ವರರಾದ ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ
ರಾಷ್ಟ್ರೀಯ ವಿಚಾರ ಸಂಕಿರಣ
ಶ್ರೀರಾಮ ವಿದ್ಯಾಕೇಂದ್ರವು ಪ್ರತಿವರ್ಷವೂ ಹಮ್ಮಿಕೊಳ್ಳುವ, ಶ್ರೀರಾಮ ಪದವಿ ಕಾಲೇಜಿನ ಆಶ್ರಯದಲ್ಲಿ ನಡೆಯುವ ರಾಷ್ಟ್ರೀಯ ವಿಚಾರ ಸಂಕಿರಣವು (13ನೇ) “ಪ್ರಚಲಿತ ಭಾರತ- ಸತ್ಯ ಮಿಥ್ಯೆ” ಎಂಬ ವಿಷಯದ ಕುರಿತು ತಾ. 25/02/2025ರಂದು ಪದವಿ ವಿಭಾಗದ ಆಜಾದ್ ಭವನದಲ್ಲಿ ನಡೆಯಿತು. ಪ್ರತಿವರ್ಷವೂ ದೇಶದ ಹಿತಚಿಂತನೆಯ ವಿಷಯದ ಕುರಿತು ವೈಚಾರಿಕ ಗೋಷ್ಠಿಗಳು ನಡೆಯುತ್ತಿದ್ದು ಈ ವರ್ಷ ಪ್ರಸಕ್ತ ಭಾರತದ ವಿದ್ಯಮಾನಗಳ ಮಿಥ್ಯೆಗಳನ್ನು ಬೆಳಕಿಗೆ ತರುವ ಮೂಲಕ ಆಗುಹೋಗುಗಳ ನಿಜಾಂಶಗಳ ಕುರಿತು ಚಿಂತನೆ ನಡೆಸಲಾಯಿತು. ಉಡುಪಿ- ಮಂಗಳೂರುಗಳಲ್ಲಿ ಐಪಿಎಸ್ ಅಧಿಕಾರಿಯಾಗಿ ತಮ್ಮ ದಕ್ಷತೆ-
ಶ್ರೀರಾಮ ವಿದ್ಯಾಕೇಂದ್ರದ ವಿವಿಧ ವಿಭಾಗಗಳಲ್ಲಿ ರಕ್ಷಾಬಂಧನ ಕಾರ್‍ಯಕ್ರಮ 2024
ಪ್ರೌಢಶಾಲೆ- ಚಾಲಕರೊಂದಿಗೆ ರಕ್ಷಾಬಂಧನ ಮತ್ತು ಸಂಸ್ಕೃತೋತ್ಸವ ಪ್ರಾಥಮಿಕ ಶಾಲೆ – ನ್ಯಾಯವಾದಿಗಳೊಂದಿಗೆ ರಕ್ಷಾಬಂಧನ ಪದವಿ ಪೂರ್ವ ವಿದ್ಯಾಲಯ ಪದವಿ ವಿದ್ಯಾಲಯ – ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ರಕ್ಷಾಬಂಧನ ಮತ್ತು ಓಣಂ ಸೆಕೆಂಡರಿ ಸ್ಕೂಲ್ ಶಿಶುಮಂದಿರ –