ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ – ಆಗತ – ಸ್ವಾಗತ ಹಾಗೂ ಎಸ್.ಎಸ್.ಎಲ್.ಸಿ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ೨೨/೬/೨೦೨೨
2022-23 ಶೈಕ್ಷಣಿಕ ವರ್ಷಕ್ಕೆ ಹೊಸತಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ವಿಶೇಷ ವಿಜೃಂಭಣೆಯಿಂದ ಸ್ವಾಗತಿಸಲಾಯಿತು. ಗಣ್ಯ ಅತಿಥಿಗಳು ದೀಪ ಪ್ರಜ್ವಲನೆಮಾಡಿ ಘೃತಾಹುತಿಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ! ಪ್ರಭಾಕರ ಭಟ್ ಕಲ್ಲಡ್ಕ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಾಲೆ ಪ್ರಾರಂಭದ ಇತಿಹಾಸ ತಿಳಿಸುತ್ತಾ ಸಂಸ್ಕಾರದ ಶ್ರೇಷ್ಠತೆಗೆ ಒತ್ತುಕೊಟ್ಟು ಗುರುಕುಲ ಶಿಕ್ಷಣದ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ ಎನ್ನುತ್ತಾ ಸರಸ್ವತಿ ವಂದನೆಯಲ್ಲಿ ಯೋಗ ಮತ್ತು ಧ್ಯಾನದ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಹೈದರಾಬಾದ್ ಕೆ.ಪಿ.ಸಿ ಪ್ರಾಜೆಕ್ಟಿನ ನಿರ್ದೇಶಕರಾದ ಶ್ರೀ ಮದಿರಾಜ್ ಸಾಯಿ ರತನ್ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಿ ಮಾತನಾಡಿ ಈ ಸಂಸ್ಥೆ ಶ್ರೀರಾಮ ಮಾತ್ರವಲ್ಲದೆ ವಿದ್ಯಾರಾಮ ಧರ್ಮರಾಯನಂತೆ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.
ಇನ್ನೋರ್ವ ಅತಿಥಿ ವಿಶ್ವ ಮಲ್ಲಕಂಬ ಫೆಡರೇಶನ್ ಸಂಸ್ಥೆಯ ಸ್ಥಾಪಕ ನಿರ್ದೇಶಕರು ಮತ್ತು ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಉದಯ್.ವಿ.ದೇಶಪಾಂಡೆ ಇವರು ಮಾತನಾಡಿ ಶಾಲೆಯ ಶಿಸ್ತು ಮತ್ತು ಶಿಕ್ಷಣ ವ್ಯವಸ್ಥೆಯನ್ನು, ಗುರುಕುಲ ಮಾದರಿ ಶಿಕ್ಷಣ ಪದ್ಧತಿಯನ್ನು ಮೆಚ್ಚಿಕೊಂಡರು. ಅಲ್ಲದೆ ಮಲ್ಲಕಂಬದಿಂದ ಆಗುವ ದೈಹಿಕ, ಬೌದ್ಧಿಕ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟರು.
ಇದೇ ವೇಳೆ ಮಾತನಾಡಿದ ಜಾಗತಿಕ ಬ್ರಾಂಡ್ ಕಾರ್ಯತಂತ್ರದ ಸಂವಹನ ಸಲಹೆಗಾರ ಮತ್ತು ನಾಯಕತ್ವದ ತರಬೇತುದಾರರಾದ ಶ್ರೀರಾಮ ಮೋಹನ್ ಶೆಟ್ಟಿಯವರು ಮಾತನಾಡಿ ಇಲ್ಲಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆ ಆಯುಕ್ತರಾದ ಕ್ಯಾಪ್ಟನ್ ಅಜಿತ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಸಂಸ್ಕಾರ ಮತ್ತು ನಾಯಕತ್ವ ಗುಣ ಬೆಳೆಸಿಕೊಂಡು ದೇಶದ ಭವಿಷ್ಯದ ಉತ್ತಮ ನಾಯಕರಾಗಿ ಎಂಬ ಕಿವಿಮಾತು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಸುನಿತ್ ಹೆಗ್ಡೆ ಸಿವಿಲ್ ಕಂಟ್ರಾಕ್ಟರ್ ಕುಂದಾಪುರ, ಶ್ರೀ ಅರುಣ್ ಭಂಡಾರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೀರಾವರಿ ಇಲಾಖೆ, ಶ್ರೀಮತಿ ಕಮಲಾ ಪ್ರಭಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಅಧ್ಯಕ್ಷರು ಶ್ರೀ ನಾರಾಯಣ ಸೋಮಯಾಜಿ ಸಂಚಾಲಕರಾದ ಶ್ರೀ ವಸಂತಮಾಧವ, ಸಹ ಸಂಚಾಲಕರಾದ ರಮೇಶ್ ಎನ್., ಮುಖ್ಯೋಪಾಧ್ಯಾಯಿನಿ ಶಾಂಭವಿ ಮಾತಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಘೃತಾಹುತಿ ಅರ್ಪಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರಿಂದ ತಿಲಕ ಧಾರಣೆಯೊಂದಿಗೆ ಆಶೀರ್ವಾದ ಪಡೆದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶ್ರದ್ಧಾ ನಿರೂಪಿಸಿ ಮನಸ್ವಿ ಸ್ವಾಗತಿಸಿ ದುರ್ಗ ಶರಣ್ ವಂದಿಸಿದನು.