ಧ್ಯೇಯ – ದೃಷ್ಟಿ
ಶಿಕ್ಷಣದೊಂದಿಗೆ ವ್ಯಕ್ತಿನಿರ್ಮಾಣ
ಜೀವನದ ಅನಿವಾರ್ಯ ಭಾಗಗಳಲ್ಲಿ ಶಿಕ್ಷಣವೂ ಒಂದು. ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಕೇವಲ ಶಿಕ್ಷಿತರಾದರೆ ಸಾಲದು. ಶಿಕ್ಷಣದ ಜೊತೆಗೆ ಇನ್ನೂ ಹತ್ತು ಹಲವಾರು ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಂತಹ ಶಿಕ್ಷಣವನ್ನು ಶ್ರೀರಾಮ ವಿದ್ಯಾಕೇಂದ್ರ ಕಳೆದ ೪೫ ವರ್ಷಗಳಿಂದ ನೀಡುತ್ತಿದೆ.
ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ
ಪರಂಪರೆಯನ್ನೊಳಗೊಂಡ ಶುದ್ಧ, ಸರಳ,
ಆಧುನಿಕ ಶಿಕ್ಷಣ ಸೌಲಭ್ಯವನ್ನೊದಗಿಸುವುದು.
ವಿದ್ಯಾರ್ಥಿ ಸಮೂಹದಲ್ಲಿ ನಿಸ್ವಾರ್ಥ, ಶ್ರದ್ಧಾಪೂರ್ಣ,
ರಾಷ್ಟ್ರಸೇವೆಯ ಚೈತನ್ಯವನ್ನು ಉದ್ದೀಪನಗೊಳಿಸುವುದು.
ಯುವಜನಾಂಗದಲ್ಲಿ ಶ್ರೇಷ್ಠತಮ ಶೀಲ
ಸಂವರ್ಧನೆಯೊಂದಿಗೆ ನಿಜ ಜೀವನದ
ಸಮಸ್ಯೆಗಳನ್ನೆದುರಿಸಲು ಅಗತ್ಯವಿರುವ
ದೃಷ್ಟಿಕೋನವನ್ನು ಬೆಳೆಸುವುದು.
ವಿದ್ಯಾರ್ಥಿ ಸಮುದಾಯದಲ್ಲಿ ಓರಣ, ಸನ್ನಡತೆ,
ಒಳ್ಳೆಯ ಹವ್ಯಾಸ-ಸದಭಿರುಚಿಗಳ ಬೆಳವಣಿಗೆಗೆ
ಮಾರ್ಗದರ್ಶನ ನೀಡುವುದು.
ಸ್ವಯಂಶಿಸ್ತಿನ ವರ್ಚಸ್ಸು ವಿದ್ಯಾರ್ಥಿ ಸಮುದಾಯದಲ್ಲಿ
ಮೂಡುವಂತೆ ಪ್ರೇರೇಪಿಸುವುದು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ೧೯೮೦ರಲ್ಲಿ ಪ್ರೌಢಶಾಲೆಯೊಂದಿಗೆ ಕಲ್ಲಡ್ಕದ ಶ್ರೀರಾಮ ಮಂದಿರದಲ್ಲಿ ಆರಂಭಗೊಂಡು ಇಂದು ಒಂದೇ ಸೂರಿನಡಿ 3338ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಶುಮಂದಿರದಿಂದ ಪದವಿಯವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ.