• 08255 – 275073
  • info@shriramakalladka.in

Sri Rama Hostel

ಶ್ರೀರಾಮ ವಸತಿ ನಿಲಯ

ದೂರದ ಊರಿನ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಶಿಶುಮಂದಿರದ ಮೇಲ್ಪಟ್ಟವರಿಗಾಗಿ ವಸತಿ ನಿಲಯದ ವ್ಯವಸ್ಥೆ.

ಕರ್ನಾಟಕ, ಕೇರಳ, ಮೇಘಾಲಯ, ಮಣಿಪುರದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಯೋಗ, ಭಜನೆ, ಆಟ, ಹೊರಸಂಚಾರ, ಇತ್ಯಾದಿಗಳ ಮುಖಾಂತರ ದೈಹಿಕ, ಬೌದ್ಧಿಕ, ನೈತಿಕ ಶಿಕ್ಷಣ ಪಡೆಯುತ್ತಿದ್ದಾರೆ.

ಊಟ, ವಸತಿ ವ್ಯವಸ್ಥೆ 
ಶಾಲಾ ಆವರಣದೊಳಗೆ ವಿಶಾಲವಾದ ಕೊಠಡಿಯಲ್ಲಿ ಸಮೂಹ ವಸತಿ. ಹಿತಮಿತವಾದ ಸತ್ವಪೂರ್ಣ ಆಹಾರ, ಬೆಳಿಗ್ಗೆ ಮತ್ತು ಸಂಜೆ ಕಾಫಿ/ಚಹ/ಹಾಲಿನ ಜೊತೆಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನ. ಹಬ್ಬದ ದಿನಗಳಲ್ಲಿ ವಿಶೇಷ ಅಡುಗೆ.

ಇತರ ಸೌಕರ್ಯಗಳು 
🔷 ಸಂಜೆಯ ಶಾರೀರಿಕ ವಿಶಾಲ ಮೈದಾನದಲ್ಲಿ.
🔷 ಗ್ರಂಥಾಲಯ, ವಾಚನಾಲಯ ವ್ಯವಸ್ಥೆ, ಆಯ್ದ ಟಿ. ವಿ. ಸಿರಿಯಲ್‌ಗಳು.
🔷 ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ವಿವಿಧ ಶಿಬಿರಗಳಲ್ಲಿ ಭಾಗವಹಿಸಲು ಅವಕಾಶ.

ವಸತಿ ನಿಲಯದಲ್ಲಿ ಅನುಸರಿಸಬೇಕಾದ ನಿಯಮಗಳು 
ಶಿಸ್ತುಪಾಲನೆ ವಿದ್ಯಾರ್ಥಿಯ ಅತ್ಯಂತ ಅವಶ್ಯವಾದ ಕರ್ತವ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯ ಹಾಗೂ ಹಾಸ್ಟೆಲ್ ಶಿಸ್ತಿನ ನಿಯಮಗಳಿಗೆ ಬದ್ಧನಾಗಿರಬೇಕು. ಶಿಸ್ತು ಪಾಲನೆಯ ಮುಖ್ಯ ಉದ್ದೇಶ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಹಾಗೂ ಆತನ ಎಲ್ಲಾ ಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡುವುದಾಗಿದೆ. ಈ ವಿದ್ಯಾ ಕೇಂದ್ರವನ್ನು ಪ್ರವೇಶಿಸುವ ವಿದ್ಯಾರ್ಥಿ ಸದ್ವರ್ತನಾಶೀಲನಾಗಿ ಸಮಾಜದಲ್ಲಿ ಗೌರವದಿಂದ ಬಾಳಬೇಕೆಂಬುದೇ ನಮ್ಮೆಲ್ಲ ಹಿರಿಯರ ಆಶಯ. ಅದರಂತೆ ಹಾಸ್ಟೆಲ್‌ನಲ್ಲಿ ಸೂಕ್ತ ನಿಯಮಾವಳಿಗಳನ್ನು ರೂಪಿಸುವ ಹಾಗೂ ಪಾಲಿಸಲು ಸೂಚಿಸುವ ಅಧಿಕಾರ ವಸತಿಪಾಲಕರದ್ದಾಗಿರುತ್ತದೆ. ಅದರಂತೆ ಕೆಲವು ಸಾಮಾನ್ಯ ಸೂಚನೆಗಳು ಈ ರೀತಿ ಇದೆ.

🔷 ಎಲ್ಲಾ ವಿದ್ಯಾರ್ಥಿಗಳು ಬೆಳಿಗ್ಗೆ 5 ಕ್ಕೆ ಎದ್ದು ದಿನದ ಸಮಯ ಸಾರಿಣಿಯಂತೆ ದಿನಚರಿಯನ್ನು ಸ್ವಯಂ ಸ್ಫೂರ್ತಿಯಿಂದ ಪಾಲಿಸತಕ್ಕದ್ದು. ವಿಭಾಗಶಃ (ಪ್ರಾಥಮಿಕ – ಪ್ರೌಢ – ಕಾಲೇಜು) ಸಮಯ ಸಾರಿಣಿಯಲ್ಲಿ ವ್ಯತ್ಯಾಸವಿದೆ.

🔷 ಸಮವಸ್ತ್ರವನ್ನು ಹಾಗೂ ಸೂಚಿಸಲಾಗುವ ಉಡುಪುಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಧರಿಸಿಕೊಳ್ಳತಕ್ಕದ್ದು. ಕಾಲರ್ ಇಲ್ಲದ, ಬರಹಗಳಿರುವ ಟೀಷರ್ಟ್ ಧರಿಸುವಂತಿಲ್ಲ.

🔷 ತಮ್ಮ ಕೊಠಡಿಗಳನ್ನು, ಅಧ್ಯಯನ ಕೊಠಡಿಗಳನ್ನು, ಹಾಸ್ಟೆಲ್ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿರುತ್ತದೆ.

🔷 ಮೌನವಾಗಿರುವುದೇ ಏಕಾಗ್ರ ಚಿತ್ತದ ಸಾಧನೆಗೆ ಮೊದಲ ಮೆಟ್ಟಿಲು. ಆದುದರಿಂದ ವಿದ್ಯಾರ್ಥಿಗಳು ಹರಟೆಗಳಲ್ಲಿ ಹಾಗೂ ಅನಗತ್ಯ ಗುಂಪು ಚರ್ಚೆಗಳಲ್ಲಿ ತೊಡಗಬಾರದು.

🔷 ಸಭ್ಯ ರೀತಿಯ ಕೇಶ, ಸರಳವಾದ ಉಡುಗೆತೊಡುಗೆ, ಅಪೇಕ್ಷಣೀಯ. ಅಂತೆಯೇ ಹಿಪ್ಪಿ ಸ್ಟೈಲ್, ಜೀನ್ಸ್ ಉಡುಗೆಗಳು, ಬಣ್ಣದ ಲುಂಗಿಗಳು, ಬಳೆಗಳನ್ನು ಧರಿಸುವುದು ಇವುಗಳನ್ನು ನಿಷೇದಿಸಿದೆ. ಇವಲ್ಲದೆ ಇತರ ಯಾವುದೇ ಅಸಭ್ಯವೆಂದು ಕಂಡು ಬರುವ ಸಂಗತಿಗಳ ಕಡೆ ವ್ಯವಸ್ಥಾಪಕರು ಗಮನಿಸಿ ಸೂಚಿಸಿದೊಡನೆ ಅವುಗಳನ್ನು ತ್ಯಜಿಸುವುದು ವಿದ್ಯಾರ್ಥಿಯ ಕರ್ತವ್ಯವಾಗಿದೆ.

🔷 ವಿದ್ಯಾರ್ಥಿಗಳು ತಮ್ಮೊಂದಿಗೆ ಯಾವುದೇ ಪುಸ್ತಕ, ಪತ್ರಿಕೆ, ರೇಡಿಯೋ, ಟೇಪ್ ರೆಕಾರ್ಡರ್, ಇಸ್ತ್ರಿಪೆಟ್ಟಿಗೆ, ಮೊಬೈಲ್ ಫೋನ್ ಂಖಿಒ ಅಚಿಡಿಜ ಇತ್ಯಾದಿಗಳನ್ನು ತರಬಾರದು. ಈ ವಸ್ತುಗಳನ್ನು ನಿಯಾಮಬಾಹಿರವಾಗಿ ಉಪಯೋಗಿಸಿದಲ್ಲಿ ವಸ್ತುವನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗುವುದು ಹಾಗೂ ಹಿಂದಿರುಗಿಸಲಾಗುವುದಿಲ್ಲ.

🔷 ಯಾವುದೇ ದುರ್ವ್ಯಸನಗಳು ಹಾಗೂ ಮೊಟ್ಟೆಯನ್ನು ಸೇರಿಸಿದಂತೆ ಯಾವುದೇ ಮಾಂಸಾಹಾರ ಸಂಪೂರ್ಣ ವರ್ಜ್ಯವಾಗಿದೆ.

🔷 ವಸತಿಯಲ್ಲಿ ತಮ್ಮೊಡನೆ ಯಾರೂ ಹಣ ಇಟ್ಟುಕೊಳ್ಳಬಾರದು. ಬೇಕಾದಾಗ ವ್ಯವಸ್ಥಾಪಕರಲ್ಲಿ ತಮ್ಮ ಖಾತೆಯ ನಿಧಿಯಿಂದ ಅವಶ್ಯಕತೆಗನುಸಾರ ಪಡೆದುಕೊಳ್ಳಬೇಕು. ಶಾಲಾ, ‘ಸಂಚಾಯಿಕಾ’ದಲ್ಲೂ ಹಣವನ್ನು ಠೇವಣಿ ಇಟ್ಟು ಬೇಕಾದಾಗ ಪಡೆದುಕೊಳ್ಳಬಹುದು.

🔷 ತಮ್ಮ ತಮ್ಮೊಳಗೆ ಹಣದ ವ್ಯವಹಾರ ಮಾಡುವುದನ್ನು ಸಂಪೂರ್ಣವಾಗಿ ನಿಷೇದಿಸಿದೆ.

🔷 ದಿನನಿತ್ಯದ ಚಟುವಟಿಕೆಗಳಲ್ಲಿ ಹಾಗೂ ಶಾಲಾ ಗಮನಾಗಮನದಲ್ಲೂ ತಡವಾಗುವುದನ್ನು ಹಾಗೂ ದಿನಚರಿಯ ಕಾರ‍್ಯಕ್ರಮಗಳಲ್ಲಿ ಅನುಮತಿ ವಿನಹ ಗೈರುಹಾಜರಾಗುವುದನ್ನು ಗಮನಿಸಿ ಎಚ್ಚರಿಸಲಾಗುತ್ತದೆ.

🔷  ಶಾಲೆಯ, ಹಾಸ್ಟೆಲ್‌ನ ಹಾಗೂ ಇತರ ಯಾವುದೇ ವಸ್ತುಗಳನ್ನು ಹಾಳುಗೆಡಹುವುದು. ಅಪರಾಧವಾಗಿರುತ್ತದೆ. ದಂಡ ವಿಧಿಸಲಾಗುವುದು.

🔷 ವಸತಿನಿಲಯಯಿಂದ ನೀಡಲಾದ ವಸ್ತುಗಳನ್ನು (ತಟ್ಟೆ, ಲೋಟ, ಮಂಚ, ಕುರ್ಚಿ, ಟೇಬಲ್) ಉಪಾಸ್ಥಿತಿಯಲ್ಲಿ ಹಿಂದಿರುಗಿಸುವುದು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು.

🔷 ತಮಗೆ ನಿಗದಿಪಡಿಸಲಾದ ಕೊಠಡಿಯನ್ನು ಹೊರತುಪಡಿಸಿ ಇನ್ನೊಂದು ಕೊಠಡಿಯನ್ನು ಪ್ರವೇಶಿಸುವುದನ್ನು ನಿಷೇದಿಸಿದೆ.

🔷 ವಿದ್ಯಾರ್ಥಿಗಳಿಗೆ ಬರುವ ಪತ್ರಗಳನ್ನು ಹಾಗೂ ಅವರು ಬರೆಯುವ ಪತ್ರಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ.

🔷 ಸದ್ವರ್ತನೆ, ಗುರುಹಿರಿಯರನ್ನು ಗೌರವಿಸುವುದು, ಎಲ್ಲಾ ಸಹಪಾಠಿಗಳನ್ನು ಸಹೋದರ ಭಾವದಿಂದ ಆತ್ಮೀಯವಾಗಿ ಕಾಣುವುದು ಹಾಗೂ ಕಿರಿಯರಿಗೆ ಮೇಲ್ಪಂಕ್ತಿಯಾಗಿ ನಡೆದುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯವಾಗಿದೆ.

🔷 ಪ್ರತಿನಿತ್ಯದ ಪ್ರಾತಃಸ್ಮರಣೆ, ಭಜನೆ, ಶಾರೀರಿಕ ಚಟುವಟಿಕೆ, ಅಧ್ಯಯನದ ಅವಧಿಗಳಿಗೆ ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಹಾಜರಿರುವುದು.

🔷 ತಮ್ಮೆಲ್ಲಾ ವಸ್ತುಗಳಿಗೆ ತಾವೇ ಜವಾಬ್ದಾರರು.

🔷 ವಿದ್ಯಾರ್ಥಿಗಳು ತಮ್ಮದೇ ಆದ ಛತ್ರಿ, ಬಿಳಿ ಮತ್ತು ಕೇಸರಿ ಪಂಚೆ, ಹ್ಯಾಂಗರ್, ಬಟ್ಟೆ ಒಣಗಿಸಲು ಟೇಪ್‌ಗಳನ್ನು, ಬಕೆಟ್, ಮಗ್ಗ್ ಹೊಂದಿರಬೇಕು.

ಹೆತ್ತವರಿಗೆ ಸೂಚನೆಗಳು 

🔷 ಹೆತ್ತವರು ವಿದ್ಯಾರ್ಥಿಯನ್ನು ಆಗಾಗ್ಗೆ ಭೇಟಿಯಾಗಬಾರದು. ಜೂನ್‌ನಲ್ಲಿ ಪ್ರವೇಶದ ನಂತರ ಆಗೋಸ್ಟ್,, ಅಕ್ಟೋಬರ್, ಡಿಸೆಂರ್ ಹಾಗೂ ಮಾರ್ಚ್‌ನಲ್ಲಿ ಹೀಗೆ ನಾಲ್ಕು ಬಾರಿ ಮಾತ್ರ ಭೇಟಿಯಾಗಲು ಅವಕಾಶವಿದೆ. ಆಗ ವ್ಯವಸ್ಥಾಪಕರಲ್ಲಿ ಅಥವಾ ಅಧ್ಯಾಪಕರಲ್ಲಿ ವಿದ್ಯಾರ್ಥಿಯ ಪ್ರಗತಿಯ ಬಗ್ಗೆ ವಿಚಾರಿಸಿಕೊಳ್ಳುವುದು ಉತ್ತಮ.

🔷 ಅಲ್ಲದೇ ಅನಿವಾರ್ಯ ಸಂದರ್ಭಗಳಲ್ಲಿ ಪೋಷಕರನ್ನು ಕರೆಯಿಸಲಾಗುವುದು.

🔷 ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಭೇಟಿಯಾಗುವುದಾಗಲೀ ದೂರವಾಣಿ ಮಾಡುವುದಾಗಲೀ ಮಾಡದೇ ಭಾನುವಾರದಂದು ಯಾ ರಜಾದಿನದಂದು ಕಾಣುವುದು.

🔷 ಹೆತ್ತವರು ವಿದ್ಯಾರ್ಥಿಯ ಕೊಠಡಿಗೆ ಹೋಗದೇ ಕಛೇರಿಯಲ್ಲಿ ವ್ಯವಸ್ಥಾಪಕರ ಉಪಸ್ಥಿತಿಯಲ್ಲಿ ಭೇಟಿಯಾಗಬೇಕು.

🔷 ವಿದ್ಯಾರ್ಥಿಗೆ ಮೊದಲ ತ್ರೈಮಾಸಿಕ ಆದ ನಂತರ ಒಮ್ಮೆ ಅಕ್ಟೋಬರ್ ಹಾಗೂ ಏಪ್ರಿಲ್‌ನಲ್ಲಿ ಮಾತ್ರ ಮನೆಗೆ ಹೋಗಲು ಅನುಮತಿ ನೀಡಲಾಗುವುದು.

🔷 ಅನಾರೋಗ್ಯದಂತಹ ಅನಿವಾರ್ಯ ಕಾರಣಗಳಾದಲ್ಲಿ ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಸಹಿ ಪಡೆದು ಅನುಮತಿ ಪತ್ರವನ್ನು ವಸತಿಪಾಲಕರಿಗೆ ನೀಡಿ ತೆರಳುವುದು.

🔷 ವಿದ್ಯಾರ್ಥಿಗಳಿಗೆ ಅನಾರೋಗ್ಯ ಉಂಟಾದಾಗ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುವುದು. ಆದಾಗ್ಯೂ ವೈದ್ಯಕೀಯ ಖರ್ಚುವೆಚ್ಚಗಳನ್ನು ಹೆತ್ತವರು ಭರಿಸಬೇಕು.

🔷 ಹೆತ್ತವರು ವಿದ್ಯಾರ್ಥಿ ಹಾಗೂ ಅಧ್ಯಾಪಕರೊಡನೆ ಉತ್ತಮವಾದ ಗುರುಶಿಷ್ಯ ಸಂಬಂಧ ಇರುವಂತೆ ನೋಡಿಕೊಳ್ಳುವುದು. ಹಾಗೂ ಅಧ್ಯಾಪಕರೊಡನೆ ಮಾತಾನಾಡಿ ವಿದ್ಯಾರ್ಥಿಯ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವರೆ ಸಹಕರಿಸುವುದು ಅತೀ ಅಗತ್ಯವಾಗಿದೆ.

🔷 ವಿದ್ಯಾರ್ಥಿ ರಜೆಯಲ್ಲಿ ಮನೆಯಲ್ಲಿದ್ದಾಗ ಆತನು ಶಾಲೆಯಲಿ, ಹಾಸ್ಟೆಲ್‌ನಲ್ಲಿ ಕಲಿತ ಸಂಸ್ಕಾರಯುತವಾದ ಎಲ್ಲಾ ಚಟುವಟಿಕೆಗಳನ್ನು ಮನೆಯಲ್ಲೂ ಅನುಸರಿಸುವರೆ ಹೆತ್ತವರು ಪ್ರೋತ್ಸಾಹಿಸಬೇಕು ತಾವು ಇಂತಹ ಚಟುವಟಿಕೆಗಳಲ್ಲಿ ತೊಡಗುವುದು. ವಿದ್ಯಾರ್ಥಿಯ ಬೆಳವಣಿಗೆಗೆ ಅನುಕೂಲಕರ ವಾತಾವರಣ ನಿರ್ಮಿಸುತ್ತದೆ. ಉದಾ. : ಬೆಳಿಗ್ಗೆ ಬೇಗ ಏಳುವುದು, ಧ್ಯಾನ, ಯೋಗಾಸನ, ಪ್ರಾರ್ಥನೆ, ಸ್ವಾಧ್ಯಯನ, ದುರ್ವ್ಯಸನ ತ್ಯಾಗ ಇತ್ಯಾದಿ.

🔷 ಅನುಮತಿರಹಿತವಾಗಿ ವಿದ್ಯಾರ್ಥಿ ಹಾಸ್ಟೆಲ್‌ನ್ನು ತ್ಯಜಿಸಿ ಹೋದಲ್ಲಿ ವಿದ್ಯಾಕೇಂದ್ರ ಹೊಣೆಯಲ್ಲ. ಮರು ಸೇರ್ಪಡೆಗೆ ದಂಡ ವಿಧಿಸಲಾಗುವುದು.

ಸೂಚನೆ : 

🔷 ಶಾಲಾ ಶುಲ್ಕವನ್ನು ಇಲಾಖಾ ನಿಯಮಗಳಿಗೆ ಅನುಗುಣವಾಗಿ ಶಾಲಾ ಕಛೇರಿಯಲ್ಲಿ ಪಾವತಿಸುವುದು.

🔷 ಹಾಸ್ಟೆಲ್ ಬಿಲ್ಲು ಪಾವತಿಯನ್ನು ನಗದಾಗಿ ಅಥವಾ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸುವುದು. ಚೆಕ್‌ಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಬ್ಯಾಂಕ್ ಡ್ರಾಫ್ಟ್‌ನ್ನು ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕ – ಈ ಹೆಸರಿಗೆ ಪಡೆಯುವುದು.

🔷 ಪ್ರತಿ ತಿಂಗಳು ನೀಡಲಾದ ಪುಸ್ತಕ, ಪೆನ್ನು, ಪೆನ್ಸಿಲ್ ಇತ್ಯಾದಿ ವಸ್ತುಗಳ ಬೆಲೆಯನ್ನು ಮುಂದಿನ ತಿಂಗಳ ಹಾಸ್ಟೆಲ್ ಬಿಲ್ಲಿನೊಂದಿಗೆ ಪಾವತಿಸತಕ್ಕದ್ದು.

🔷 ಪ್ರಾರಂಭದಲ್ಲಿ ನೀಡಲಾಗುವ ಪುಸ್ತಕ ಹಾಗೂ ಸಮವಸ್ತ್ರದ ಮೌಲ್ಯವನ್ನು ಪ್ರತ್ಯೇಕವಾಗಿ ಹೆತ್ತವರು ಪಾವತಿಸಬೇಕು.

🔷 ಹಾಸ್ಟಲ್‌ನಿಂದ ಏರ್ಪಡಿಸಲಾಗುವ ಪ್ರವಾಸದಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಬೇಕು.

Institutions

Sri Rama Vidyakendra Trust (R.)

Know More

Sri Rama Degree College – 9141030982, 9964280734

Know More

Sri Rama P.U. College – 9141030981, 9449579959

Know More

Sri Rama High School – 914030980, 9482189419

Know More

Sri Rama Primary School – 9141030979, 9964282456

Know More

Sri Rama Shishu Mandira – 9141030978

Know More

Contribute

Your donation will help us accomplish our mission of ensuring for child education and happy childhoods for underprivileged children across Karnataka.

Contribute Now