News & Events
ಸೀತಾ ರಸೋಯಿ ಪಾಕಶಾಲಾ ಸಮುಚ್ಚಯ ಉದ್ಘಾಟನೆ 9.4.2022
ಶ್ರೀರಾಮ ವಿದ್ಯಾಕೇಂದ್ರದ ಕಲ್ಲಡ್ಕದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ ಇದರ ಸಹಕಾರದಿಂದ ನೂತನವಾಗಿ ನಿರ್ಮಿಸಿದ ಪಾಕಶಾಲಾ ಸಮುಚ್ಚಯ ಇಂದು ಉದ್ಘಾಟನೆಗೊಂಡಿತು. ಎರಡು ಭೋಜನಾಲಯ, ಒಂದು ಅಡುಗೆ ಶಾಲೆ ಹಾಗೂ ಕಚೇರಿ, ಉಗ್ರಾಣವನ್ನೊಳಗೊಂಡ ೪ ಮಹಡಿಯುಳ್ಳ ಕಟ್ಟಡವಾಗಿದೆ. ಇಲ್ಲಿ ೫೦೦೦ಜನರಿಗೆ ಏಕಕಾಲದಲ್ಲಿ ಅಡುಗೆ ಸಿದ್ಧಪಡಿಸಬಹುದಾಗಿದೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರಂಭಗೊಂಡ ಕಾರ್‍ಯಕ್ರಮದಲ್ಲಿ, ಅತಿಥಿಗಳು ಗಂಟೆ ಬಾರಿಸಿದಾಗ ಮುಖ್ಯ ದ್ವಾರದ ಪರದೆ ಪಕ್ಕಕ್ಕೆ ಸರಿಯುವ ಮೂಲಕ ಕಟ್ಟಡವು ಉದ್ಘಾಟನೆಗೊಂಡಿತು. ನಂತರ ನಡೆದ ಸಭಾ ಕಾರ್‍ಯಕ್ರಮದಲ್ಲಿ ವಿದ್ಯಾಕೇಂದ್ರದ ಸಂಚಾಲಕರು
ರಾಷ್ಟ್ರೀಯ ವಿಜ್ಞಾನ ದಿನಾಚರಣೆ – ಪರಿಸರವನ್ನು ಪ್ರೀತಿಸಬೇಕು- ಪದ್ಮಶ್ರೀ ಶ್ರೀ ಅಮೈ ಮಹಾಲಿಂಗ ನಾಯ್ಕ
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ.ವಿ ರಾಮನ್‌ರವರು ಆವಿಷ್ಕರಿಸಿದ ರಾಮನ್ ಪ್ರಭಾವದ ದಿನವನ್ನು ಗುರುತಿಸುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಒಂದು ವಾರಗಳ ಕಾಲ ಜ್ಞಾನಧಾರ ಸಪ್ತಾಹ ಎಂಬ ಕಾರ್ಯಕ್ರಮದಡಿಯಲ್ಲಿ ನಡೆಸಿ ದಿನಾಂಕ 28.02.2022 ರಂದು ಸಮಾರೋಪ ಕಾರ್ಯಕ್ರಮ ನಡೆಸಲಾಯಿತು. ಬಂದತಂಹ ಅಥಿತಿಗಳಿಗೆ ಅಡಿಕೆ ಗಿಡಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕರವರನ್ನು ಗೌರವಿಸಲಾಯಿತು. ಪದ್ಮಶ್ರೀ
ವಿದ್ಯಾಭಾರತಿ ಅ.ಭಾ ಸಂಘಟನಾ ಕಾರ್ಯದರ್ಶಿ ಶ್ರೀ ಕಾಶಿಪತಿ ಇವರು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ
ವಿದ್ಯಾಭಾರತಿ ಅ.ಭಾ ಸಂಘಟನಾ ಕಾರ್ಯದರ್ಶಿ ಶ್ರೀ ಕಾಶಿಪತಿ ಇವರು ದಿನಾಂಕ 16.02.2022ರಂದು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿ, ವಿದ್ಯಾಕೇಂದ್ರದ ಬೋಧಕ ಸಿಬ್ಬಂದಿಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಮರುದಿನ ಶ್ರೀರಾಮ ಪ್ರೌಢಶಾಲೆಯ ಸರಸ್ವತಿ ವಂದನ ಸಭಾದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿ ದೇಶಕ್ಕೆ ವಿಜಯ ತಂದ ಸಾಹಸಿ ವೀರ ಪರಾಕ್ರಮಿಯಾದ ವಿಕ್ರಂ ಭಾದ್ರ ಇವರ ಕಥೆಯನ್ನು ಹೇಳಿ ರೋಮಾಂಚನಗೊಳಿಸಿದರು. ಬಳಿಕ ಶಿಶುಮಂದಿರ, ಪ್ರಾಥಮಿಕ ಶಾಲಾ ಮಕ್ಕಳ ಚಟುವಟಿಕೆಗಳನ್ನು ವೀಕ್ಷಣೆ ಮಾಡಿ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ
‘ಕೆಡ್ಡಸ’ ಎಂಬುದು ಮನನ ಮಾಡಿಕೊಳ್ಳುವ ಆಚರಣೆಯಾಗಬೇಕೇ ಹೊರತು, ಮರೆತು ಹೋಗುತ್ತಿರುವ ಆಚರಣೆಯಾಗಬಾರದು
ದಿನಾಂಕ 12.02.2022ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಡ್ಡಸ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ತುಳಸಿಕಟ್ಟೆಯ ಮುಂದೆ ಗೋಮಯದಿಂದ ಶುದ್ಧೀಕರಿಸಿ, ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸಿ, ಭೂಮಿ ದೇವಿಯ ಸಾನಿಧ್ಯ ರಚಿಸಿ, ದೀಪಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಕಾಯಿ, ಅರಶಿನ- ಕುಂಕುಮ, ಪಚ್ಚೆ ಹಸಿರಿನ ಹುಡಿ, ವೀಳ್ಯೆದೆಲೆ ಇತ್ಯಾದಿಗಳನ್ನು ಭೂಮಿ ದೇವಿಯ ಸ್ನಾನಕ್ಕೋಸ್ಕರ ಇಟ್ಟು ಹುರುಳಿ, ಹೆಸರು ಕಾಳು, ಒಣಕೊಬ್ಬರಿ, ಕಡಲೆಕಾಯಿಗಳ ಮಿಶ್ರಣ(ನನ್ನೇರಿ) ಇದರೊಂದಿಗೆ ತುಳುನಾಡಿನ ವಿವಿಧ ಭಕ್ಷ್ಯಗಳನ್ನು(ಸಾರ್ನಡ್ಡೆ) ಊರಿನ ಹಿರಿಯ ತಾಯಿಯಾದ ಜಯಂತಿಯವರು ಭೂಮಿಗೆ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ 73ನೇ ಗಣರಾಜ್ಯೋತ್ಸವ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ, ಕಾಂಪ್ರಬೈಲ್ ಶ್ರೀ ಉಳ್ಳಾಲ್ತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಜಯಾನಂದ ಆಚಾರ್ಯ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಎನ್.ಸಿ.ಸಿ ವಿದ್ಯಾರ್ಥಿಗಳು ಘೋಷ್ ವಾದನದೊಂದಿಗೆ ಪಥಸಂಚಲನ ನಡೆಸಿದರು. ನಂತರ ಪ್ರೌಢಶಾಲೆಯಲ್ಲಿ ನಡೆದ ಸಭಾ ಕಾರ್‍ಯಕ್ರಮದಲ್ಲಿ ಗಣ್ಯರು ಡಾ. ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಯತಿರಾಜ್ ಪೆರಾಜೆ ಮಾತನಾಡುತ್ತಾ ಇಂದು ಜಯಂತಿ, ಉತ್ಸವಗಳ ಆಚರಣೆ ನಾಟಕೀಯವಾಗಿದ್ದು,
ಭಜನೆಯೇ ನನ್ನ ಯಶಸ್ಸಿನ ಹಿಂದಿನ ರಹಸ್ಯ ಕಲ್ಲಡ್ಕದ ಆಜಾದಿ ಪರ್ವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕ ಸಂದೇಶ್ ನೀರುಮಾರ್ಗ
ಜ: ೧೪, ಕಲ್ಲಡ್ಕದ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ದ.ಕ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ನಡೆದ ?ಆಜಾದಿ ಪರ್ವ? ಹೆಸರಿನ ಅಂತರ್‌ಕಾಲೇಜು ಫೆಸ್ಟ್‌ನ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಲರ್ಸ್ ಕನ್ನಡ “ಎದೆ ತುಂಬಿ ಹಾಡುವೆನು “ಖ್ಯಾತಿಯ ಶ್ರೀ ಸಂದೇಶ್ ನೀರುಮಾರ್ಗ ಮಾತನಾಡುತ್ತಾ, ?ಬಾಲ್ಯದಿಂದಲೂ ಭಜನೆಯಲ್ಲಿ ಅತೀವ ಆಸಕ್ತಿ ಇದ್ದ ನನಗೆ ಇಂದು ಅದುವೇ ಮೆಟ್ಟಿಲಾಗಿ ಎತ್ತರಕ್ಕೆ ಕರೆದೊಯ್ದಿದೆ. ಎಸ್. ಪಿ. ಬಾಲಸುಬ್ರಹ್ಮಣ್ಯರಂತಹ ಶ್ರೇಷ್ಟ ಗಾಯಕರು ರಚಿಸಿದ
vivekananda jayanthi
ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ವಿವೇಕಾಮೃತ ಸಿಂಚನ ಕಾರ್ಯಕ್ರಮವು ನಡೆಯಿತು. ವಿವೇಕಾನಂದರ ವೇಷಧರಿಸಿದ ವಿದ್ಯಾರ್ಥಿಗಳು ವಿವೇಕವಾಣಿ ಉದ್ಘೋಷಿಸಿದರು. ಕಾರ್ಯಕ್ರಮದಲ್ಲಿ ಡಿವೈನ್ ಪಾರ್ಕ್ ಸಾಲಿಗ್ರಾಮ ಉಡುಪಿ ಇದರ ಮಹಿಳಾ ಮೇಲ್ವಿಚಾರಣಾ ಅಧಿಕಾರಿ ಪ್ರೇಮ ಪ್ರಭಾಕರ್, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮತ್ತು ವಿವೇಕಾನಂದರ ಆಧ್ಯಾತ್ಮಿಕ ಜೀವನ, ವೈಜ್ಞಾನಿಕ ಚಿಂತನೆ,ದೇಶ, ಧರ್ಮ ಯುವಜನಾಂಗದ ಬಗ್ಗೆ ಅವರ ಕಾಳಜಿ,ಬಡತನ ನಿರ್ಮೂಲನೆಗಾಗಿ ಅವರ ಶ್ರಮ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ವಿಶ್ವಕ್ಕೆ ಸಾರಿದ
‘ಶ್ರೀರಾಮ ಸರ್ವಿಸ್ ಸ್ಟೇಷನ್ ಉದ್ಘಾಟನೆ
ಶ್ರೀರಾಮ ವಿದ್ಯಾಕೇಂದ್ರದ ಶಾಲಾ ವಾಹನ ಶಾಲಾ ವಾಹನಗಳನ್ನು ಯಂತ್ರಗಳ ಸಹಾಯದಿಂದ ಸ್ವಚ್ಛಗೊಳಿಸಲು ‘ಶ್ರೀರಾಮ ಸರ್ವಿಸ್ ಸ್ಟೇಷನ’ನ್ನು ಪ್ರಾರಂಭಿಸಲಾಗಿದೆ. ಸಂಸ್ಥೆಯ ಹಿರಿಯರಾದ ಡಾ ಪ್ರಭಾಕರ ಭಟ್ ಕಲ್ಲಡ್ಕ ಇವರು ತೆಂಗಿನಕಾಯಿ ಒಡೆಯುವ ಮೂಲಕ ಹಾಗೂ ಯಂತ್ರವನ್ನು ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀ ವಸಂತಮಾಧವ, ಸಹ ಸಂಚಾಲಕರಾದ ಶ್ರೀ ರಮೇಶ ಎನ್. ವಿವಿಧ ವಿಭಾಗಗಳ ಪ್ರಮುಖರು ಹಾಗೂ ಶಾಲಾ ವಾಹನದ ಪ್ರಮುಖರಾದ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ್ ಕಣಂತೂರು ಮತ್ತು