ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗೋವಾ ರಾಜ್ಯದ ಮುಖ್ಯಮಂತ್ರಿ ಶ್ರೀ ಡಾ. ಪ್ರಮೋದ್ ಸಾವಂತ್ ಇವರು ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀರಾಮನ ಗುಣಗಳು ಮೈಗೂಡಲಿ, ವಿದ್ಯಾರ್ಥಿಗಳು ಕೌಶಲ್ಯ ಆಧಾರಿತ ಶಿಕ್ಷಣದ ಕಡೆಗೆ ಆಸಕ್ತಿ ವಹಿಸಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಇವರು ಶ್ರೀರಾಮ ವಿದ್ಯಾಕೇಂದ್ರವು ಅನೇಕ ಅನುಭವಗಳ ಕಣಜ ನಮ್ಮ ವಿದ್ಯಾಭ್ಯಾಸ ಕೇವಲ ಅಂಕಗಳಿಗೆ ಮೀಸಲಾಗಿರದೆ ಮೌಲ್ಯಧಾರಿತ ಅಂಕಗಳಿಗೆ ಬದಲಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಬಂಟ್ವಾಳ ವಿಧಾನಸಭೆಯ ಶಾಸಕರಾದ ಶ್ರೀ ರಾಜೇಶ್ ನ್ಯಾಕ್, ಮಂಗಳೂರು ವಿಧಾನ ಸಭೆ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಉಡುಪಿ ಪ್ರಸಾದ ನೇತ್ರಾಲಯದ ನಿರ್ದೇಶಕರಾದ ಡಾ| ಕೃಷ್ಣ ಪ್ರಸಾದ್ ಕೂಡ್ಲು, ಚೈರ್ಮೆನ್ ಮೈ ವೀರ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಮುಂಬೈಯ ಶ್ರೀ ಪ್ರವೀಣ್ ಹೆಗ್ಡೆ, ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್. ಸಿ. ರಮೇಶ್, ಮುಂಬೈ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಬಾಲಕೃಷ್ಣ ಭಂಡಾರಿ, ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿ, ಸಂಚಾಲಕರಾದ ಶ್ರೀ ವಸಂತ ಮಾಧವ, ವಿಟ್ಲ ವಿಧಾನ ಸಭೆಯ ಮಾಜಿ ಶಾಸಕರಾದ ಶ್ರೀ ಪದ್ಮನಾಭ ಕೊಟ್ಟಾರಿ, ಕರ್ನಾಟಕ ರಾಷ್ಟ್ರ ಸೇವಿಕಾ ಸಮಿತಿಯ ಹೊಯ್ಸಳ ಪ್ರಾಂತದ ಕಾರ್ಯಕಾರಿಣಿ ಸದಸ್ಯರಾದ ಡಾ| ಕಮಲಾ ಪ್ರಭಾಕರ್ ಭಟ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ಕುಮಾರಿ ಸಮೃದ್ಧಿ, ರಂಜಿತ್, ರೋಶಿತ್ ಕಲಾ ವಿಭಾಗದ ಕುಮಾರಿ ಹರ್ಷಿತಾ, ಭೂಷಣ್ ವಾಣಿಜ್ಯ ವಿಭಾಗದ ಕುಮಾರಿ ಕೃತಿಕಾ, ಕುಮಾರಿ ಗೌತಮಿ, ಕುಮಾರಿ ಅಶ್ವಿನಿ, ಕುಮಾರಿ ರುಚಿತಾ,ಅಧಿಕ್ ಇವರು ತಮ್ಮಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಚಟುವಟಿಕೆಗಳು ಹಾಗೂ ಕ್ರೀಡೋತ್ಸವದ ಕೆಲವು ಪ್ರದರ್ಶನಗಳಾದ ಮಲ್ಲಕಂಬ, ಕೂಪಿಕಾ, ಸ್ಕೇಟಿಂಗ್, ಬೆಂಕಿ ಸಾಹಸ ಮತ್ತು ಜಡೆಕೋಲಾಟಗಳನ್ನು ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯಾರ್ಥಿಗಳು ಅತಿಥೀಗಳಿಗೆ ಪ್ರದರ್ಶಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರಥಮ ವಿಜ್ಞಾನ ವಿಭಾಗದ ಕುಮಾರಿ ಸ್ವಾತಿ, ಸ್ವಾಗತವನ್ನು ಪ್ರಥಮ ವಾಣಿಜ್ಯ ವಿಭಾಗದ ಕುಮಾರಿ ಪ್ರಿಯಾಂಕ ಮತ್ತು ಧನ್ಯವಾದವನ್ನು ಪ್ರಥಮ ವಿಜ್ಞಾನ ವಿಭಾಗದ ವೆಂಕಟೇಶ್ ಮತ್ತು ಹಿಂದಿ ಉಪನ್ಯಾಸಕರಾದ ಶ್ರೀಮತಿ ಶೋಭಾ ವಿ. ಶೆಟ್ಟಿ ಇವರುಗಳು ನಿರ್ವಹಿಸಿದರು.