
ಶ್ರೀರಾಮ ಪ್ರಾಥಮಿಕ ಶಾಲೆ
1988 – 1989ನೇ ಸಾಲಿನಲ್ಲಿ ಕೊಲ್ಯ ಶ್ರೀ ಶ್ರೀ ಶ್ರೀ ರಮಾನಂದ ಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಪ್ರಾರಂಭವಾಯಿತು. 55 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡು ಪ್ರಸಕ್ತ ಸಾಲಿನಲ್ಲಿ 1273 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಹಿರಿಯರ ಆಶಯದಂತೆ ಗುರುಕುಲ ಮಾದರಿಯ ಕುಟೀರಗಳಲ್ಲಿ ನೀಡಲಾಗುತ್ತಿರುವುದು ನಮ್ಮ ವಿದ್ಯಾಸಂಸ್ಥೆಯ ವಿಶೇಷತೆ. ವಿದ್ಯಾರ್ಥಿಗಳು ಮನೆಯಿಂದ ಹೊರಟು ಶಾಲೆಗೆ ಬರುವಾಗ ಹೊರ ಜಗತ್ತಿನ ಮಾನಸಿಕತೆಯಿಂದ ಹೊರಬಂದು ಪಠ್ಯ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಲು ಪೂರಕವಾಗುವಂತೆ ಧ್ಯಾನ ಮಾಡುವುದಕ್ಕಾಗಿ ವೇದವ್ಯಾಸ ಧ್ಯಾನಮಂದಿರದ ಅನುಕೂಲತೆಯನ್ನು ಒದಗಿಸಲಾಗಿದೆ.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಹನುಮಾನ್ ನಗರ ಕಲ್ಲಡ್ಕ
ಸಂಪರ್ಕ: 9141090979
ಶ್ರೀರಾಮ ಪ್ರಾಥಮಿಕ ಶಾಲೆಗೆ ಸೇರ ಬಯಸುವವರು ಈ ಕೆಳಗಿನ ಲಿಂಕ್ನ ಮೂಲಕ ನೋಂದಾವಣೆ ಮಾಡಿಕೊಳ್ಳಿ.