ಶ್ರೀರಾಮ ವಿದ್ಯಾಕೇಂದ್ರದ ಶಾಲಾ ವಾಹನ ಶಾಲಾ ವಾಹನಗಳನ್ನು ಯಂತ್ರಗಳ ಸಹಾಯದಿಂದ ಸ್ವಚ್ಛಗೊಳಿಸಲು ‘ಶ್ರೀರಾಮ ಸರ್ವಿಸ್ ಸ್ಟೇಷನ’ನ್ನು ಪ್ರಾರಂಭಿಸಲಾಗಿದೆ. ಸಂಸ್ಥೆಯ ಹಿರಿಯರಾದ ಡಾ ಪ್ರಭಾಕರ ಭಟ್ ಕಲ್ಲಡ್ಕ ಇವರು ತೆಂಗಿನಕಾಯಿ ಒಡೆಯುವ ಮೂಲಕ ಹಾಗೂ ಯಂತ್ರವನ್ನು ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀ ವಸಂತಮಾಧವ, ಸಹ ಸಂಚಾಲಕರಾದ ಶ್ರೀ ರಮೇಶ ಎನ್. ವಿವಿಧ ವಿಭಾಗಗಳ ಪ್ರಮುಖರು ಹಾಗೂ ಶಾಲಾ ವಾಹನದ ಪ್ರಮುಖರಾದ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ್ ಕಣಂತೂರು ಮತ್ತು ವಾಹನ ಚಾಲಕರು ನಿರ್ವಾಹಕರು ಉಪಸ್ಥಿತರಿದ್ದರು.