• 08255 – 275073
  • info@shriramakalladka.in

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ 73ನೇ ಗಣರಾಜ್ಯೋತ್ಸವ

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ, ಕಾಂಪ್ರಬೈಲ್ ಶ್ರೀ ಉಳ್ಳಾಲ್ತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಜಯಾನಂದ ಆಚಾರ್ಯ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಎನ್.ಸಿ.ಸಿ ವಿದ್ಯಾರ್ಥಿಗಳು ಘೋಷ್ ವಾದನದೊಂದಿಗೆ  ಪಥಸಂಚಲನ ನಡೆಸಿದರು.


ನಂತರ ಪ್ರೌಢಶಾಲೆಯಲ್ಲಿ ನಡೆದ ಸಭಾ ಕಾರ್‍ಯಕ್ರಮದಲ್ಲಿ ಗಣ್ಯರು ಡಾ. ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಯತಿರಾಜ್ ಪೆರಾಜೆ ಮಾತನಾಡುತ್ತಾ ಇಂದು ಜಯಂತಿ, ಉತ್ಸವಗಳ ಆಚರಣೆ ನಾಟಕೀಯವಾಗಿದ್ದು, ಉದ್ದೇಶಿತ ತತ್ವಗಳು ಜೀವನದಲ್ಲಿ ಅಳವಡಿಕೆಯಾಗದಿರುವುದು ಖೇದಕರ. ಅಂಬೇಡ್ಕರರ ಜಯಂತಿಯಂಥಹ ಕಾರ್ಯಕ್ರಮಗಳನ್ನು ಕಳೆದ 75 ವರ್ಷಗಳಿಂದ ಮಾಡುತ್ತಿದ್ದರೂ, ಜೀವನದಲ್ಲಿ ಅಳವಡಿಸುವ ಪ್ರಯತ್ನಗಳು ಆಗಲೇ ಇಲ್ಲ, ಈ ಹಿನ್ನೆಲೆಯಲ್ಲಿ ಯೋಚಿಸಬೇಕಾದ ಅಗತ್ಯತೆ ಮತ್ತು ಕಾರ್ಯಕ್ರಮಗಳು ವರದಿಗೆ ಸೀಮಿತವಾಗದೆ ಕಾರ್ಯರೂಪಕಕ್ಕೆ ಬರಬೇಕು ಎಂದರು.


ವಿದ್ಯಾಕೇಂದ್ರದ ಸಹಸಂಚಾಲಕರು ಶ್ರೀ ರಮೇಶ್ ಎನ್, ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ಶಾಂಭವಿ ಮಾತಾಜಿ, ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರು ಶ್ರೀ ವಸಂತ ಬಲ್ಲಾಳ್, ಪದವಿ ವಿಭಾಗದ ಪ್ರಾಂಶುಪಾಲರು ಶ್ರೀ ಕೃಷ್ಣಪ್ರಸಾದ್ ಹಾಗೂ  ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಪ.ಪೂ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಕರುಣಾಕರ ಶ್ರೀಮಾನ್ ಮತ್ತು ಪ್ರೌಢಶಾಲಾ  ಶಾರೀರಿಕ  ಶಿಕ್ಷಣ   ಶಿಕ್ಷಕರಾದ ಶ್ರೀ ಪುರುಷೋತ್ತಮ ಶ್ರೀಮಾನ್ ಕಾರ್ಯಕ್ರಮದ ಸಂಯೋಜನೆಯನ್ನು ಹಾಗೂ ಗೋಪಾಲ್ ಶ್ರೀಮಾನ್ ಮತ್ತು ಜಿನ್ನಪ್ಪ ಶ್ರೀಮಾನ್ ಕಾರ್‍ಯಕ್ರಮವನ್ನು ನಿರ್ವಹಿಸಿದರು.

Institutions

Sri Rama Vidyakendra Trust (R.)

Know More

Sri Rama Degree College – 9141030982, 9964280734

Know More

Sri Rama P.U. College – 9141030981, 9449579959

Know More

Sri Rama High School – 914030980, 9482189419

Know More

Sri Rama Primary School – 9141030979, 9964282456

Know More

Sri Rama Shishu Mandira – 9141030978

Know More

Contribute

Your donation will help us accomplish our mission of ensuring for child education and happy childhoods for underprivileged children across Karnataka.

Contribute Now