
ಶೀರೂರು ಮಠದ ಪೂಜ್ಯ ಸ್ವಾಮೀಜಿ ಶ್ರೀ ಶ್ರೀ ವೇದವರ್ಧನ ಶ್ರೀಪಾದಂಗಳವರು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದರು. ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ವಿದ್ಯಾರ್ಥಿಗಳ ದೈನಂದಿನ ಪ್ರಾರ್ಥನೆಯಾದ ಸರಸ್ವತಿ ವಂದನೆಯನ್ನು ವೀಕ್ಷಿಸಿ “ಶರೀರವು ಇರುವುದು ಪರೋಪಕಾರಕ್ಕಾಗಿ ನಾವು ಕಲಿತಿರುವ ವಿದ್ಯೆಯನ್ನು ದೇಶಕ್ಕೆ ಪ್ರೇರಕವಾಗುವಂತೆ ಮಾಡಬೇಕು, ಸಂಸ್ಕಾರ ಮತ್ತು ಗುಣಗಳಿಂದ ದೇಶವನ್ನು ಕಟ್ಟಲು ವಿದ್ಯೆ ಅಗತ್ಯವಾಗಿದೆ” ಎಂದು ವಿದ್ಯಾರ್ಥಿಗಳಿಗೆ ಆಶೀರ್ವಚನ ಮಾಡಿದರು. ವೇದಿಕೆಯಲ್ಲಿ ಪೂಜ್ಯ ಸ್ವಾಮೀಜಿಯವರ ತಂದೆಯಾದ ಶ್ರೀ ಉದಯ ಕುಮಾರ ಹಾಗೂ ತಾಯಿ ಉಪಸ್ಥಿತರಿದ್ದರು. ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾಗಿರುವ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹಾಗೂ ವಿದ್ಯಾಕೇಂದ್ರದ ಸಂಚಾಲಕರಾಗಿರುವ ಶ್ರೀ ವಸಂತ ಮಾಧವ ಶ್ರೀಮಾನ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪದ್ಮನಾಭ ಕೊಟ್ಟಾರಿ, ಶ್ರೀ ಮುರಳಿಧರ, ಡಾ. ಕಮಲ ಪ್ರಭಾಕರ್ ಭಟ್, ಶ್ರೀ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಶ್ರೀ ಸೂರ್ಯನಾರಾಯಣ ಭಟ್ ಕಶೆಕೋಡಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.