ವಿದ್ಯಾಭಾರತಿ ಅ.ಭಾ ಸಂಘಟನಾ ಕಾರ್ಯದರ್ಶಿ ಶ್ರೀ ಕಾಶಿಪತಿ ಇವರು ದಿನಾಂಕ 16.02.2022ರಂದು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿ, ವಿದ್ಯಾಕೇಂದ್ರದ ಬೋಧಕ ಸಿಬ್ಬಂದಿಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಮರುದಿನ ಶ್ರೀರಾಮ ಪ್ರೌಢಶಾಲೆಯ ಸರಸ್ವತಿ ವಂದನ ಸಭಾದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿ ದೇಶಕ್ಕೆ ವಿಜಯ ತಂದ ಸಾಹಸಿ ವೀರ ಪರಾಕ್ರಮಿಯಾದ ವಿಕ್ರಂ ಭಾದ್ರ ಇವರ ಕಥೆಯನ್ನು ಹೇಳಿ ರೋಮಾಂಚನಗೊಳಿಸಿದರು. ಬಳಿಕ ಶಿಶುಮಂದಿರ, ಪ್ರಾಥಮಿಕ ಶಾಲಾ ಮಕ್ಕಳ ಚಟುವಟಿಕೆಗಳನ್ನು ವೀಕ್ಷಣೆ ಮಾಡಿ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ಉಮೇಶ್ ಕುಮಾರ್, ಜಿಲ್ಲಾಧ್ಯಕ್ಷರಾದ ಶ್ರೀ ಲೋಕಯ್ಯ ಡಿ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿ, ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿಗಳು ಹಾಗೂ ಸಂಸ್ಥೆಯ ಸಂಚಾಲರಾದ ಶ್ರೀ ವಸಂತಮಾಧವ ಉಪಸ್ಥಿತರಿದ್ದರು.