29.03.2023 ರಂದು ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ 7ನೇ ತರಗತಿಯ ದೀಪಪ್ರದಾನ ಕಾರ್ಯಕ್ರಮ
ಬೆಂಗಳೂರು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಮಾತಾನಾಡುತ್ತಾ, ನಾನು ವಿದ್ಯಾಸಂಸ್ಥೆಯ ಆವರಣದಲ್ಲಿ ಕಳೆದ ಅಷ್ಟು ಸಮಯ ನನ್ನಷ್ಟಕ್ಕೆ ನಾನು ಅಂತರ್ಮುಖಿಯಾಗಿದ್ದೇನೆ. ಪತ್ರಕಾರನಾಗಿರುವ ನಾನು ಯಾವುದದರೂ ತಪ್ಪು ಸಿಗುತ್ತದೆಯೋ ಎಂದು ಹುಡುಕುತ್ತಿದ್ದಾಗ ನನಗೆ ತೃಣಮಾತ್ರದಷ್ಟು ತಪ್ಪು ಸಿಗಲಿಲ್ಲ. ಸಣ್ಣ ಸಣ್ಣ ಸಂಗತಿಗಳು ನಮ್ಮ ಜೀವನವನ್ನು ಸುಧಾರಿಸುತ್ತದೆ. ಸಾಧ್ಯವಾದರೆ ಆ ಸಣ್ಣ ಸಂಗತಿಗಳು ಜಗತ್ತನ್ನೆ ಬದಲಿಸಬಹುದು. ಅಂತೆಯೇ ಈ ಜಗತ್ತನ್ನು ಬದಲಾಯಿಸಲು ಸಣ್ಣ ಹಣತೆ ಸಾಕು. ಇವತ್ತಿನ ದೀಪಪ್ರದಾನ ಕಾರ್ಯಕ್ರಮದಲ್ಲಿ ದೀಪಪ್ರದಾನ ಎನ್ನುವ ಹೆಸರೇ ಅದ್ಬುತವಾದ ಪದ ಪ್ರಯೋಗವಾಗಿದೆ. ಒಂದು ದೀಪದಿಂದ ಲಕ್ಷ ದೀಪವನ್ನು ಕೋಟಿ ದೀಪವನ್ನು ಬೆಳಗಲು ಸಾಧ್ಯ. ಈ ಶಾಲೆಯಲ್ಲಿ ಕಲಿತ ಮಗು ಜ್ಞಾನ-ಸಂಸ್ಕೃತಿ ಪ್ರಸಾರದಲ್ಲಿ ಇಡೀ ಜಗತ್ತನ್ನು ಆವರಿಸಿದರೆ ಅದು ಅತಿಶಯೋಕ್ತಿಯಲ್ಲ. ಯಾಕೆಂದರೆ ಈ ಮಣ್ಣಿನ ಗುಣ ಆ ರೀತಿ ಇದೆ ಈ ಶಾಲೆಯಲ್ಲಿ ಕಲಿತಂತಹ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ,ಧೃಡ ನಿಲುವನ್ನು ನೋಡಿ ಸಂತಸವಾಯಿತು. ಇಲ್ಲಿ ಕೇವಲ ಪ್ರಮಾಣ ಪತ್ರಕ್ಕಾಗಿ ಶಿಕ್ಷಣ ನೀಡುತ್ತಿಲ್ಲ. ನಮ್ಮನ್ನು ಮನುಷ್ಯರನ್ನಾಗಿ ಮಾಡುವ ಸಂಸ್ಕಾರಯುತ ಹಾಗೂ ಮೌಲ್ಯಯುತ ಶಿಕ್ಷಣವನ್ನು ನೀಡಲಾಗುತ್ತದೆ. ಇಂತಹ ಅತ್ಯದ್ಬುತವಾದ ವಿದ್ಯಾಸಂಸ್ಥೆಯನ್ನು ಕಟ್ಟಿರುವುದಕ್ಕೆ ಅಭಿಮಾನವಿದೆ. ಈ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ಶಿಸ್ತು ಕಂಡು ಸಂತಸವಾಯಿತು. ವಿದ್ಯಾರ್ಥಿಗಳಾದ ನೀವು ಇಂತಹ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಪುಣ್ಯ ಮಾಡಿದ್ದೀರಿ. ಎಲ್ಲಾರಿಗೂ ಶುಭವಾಗಲಿ ಎಂದು ಹಾರೈಸಿದರು.работни обувки fw34 steelite lusum s1p 38
normamascellani.it
covorase man
bayern münchen spieler
karl sneakers
addobbi fai da te matrimonio
prestonstadler.com
spoločenské šaty pre moletky
fingateau.com
lifeonthevineministries.com
ಮೊದಲಿಗೆ ಈ ಕಾರ್ಯಕ್ರಮವು ನಿರ್ವಿಘ್ನವಾಗಿ ಸಾಗಲಿ ಎಂಬ ಆಶಯದೊಂದಿಗೆ ಅತಿಥಿಗಳಿಂದ ದೀಪ ಪ್ರಜ್ವಲನೆ ಮತ್ತು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ. ದೈನಂದಿನ ಪ್ರಾರ್ಥನೆಯಾದ ಸರಸ್ವತಿ ವಂದನೆ ಅಗ್ನಿಹೋತ್ರದೊಂದಿಗೆ ನಡೆಯಿತು.
ನಂತರ ೭ನೇ ತರಗತಿಯ ವಿದ್ಯಾರ್ಥಿಗಳು ತಾವು ಪಡೆದ ಸಂಸ್ಕಾರಭರಿತವಾದ ಶಿಕ್ಷಣವು ಗಟ್ಟಿಯಾಗಿ ಬೇರೂರಿ ಭವಿಷ್ಯದಲ್ಲಿ ಮನಸ್ಸು ಜಡವಾಗದೆ ಬಾಳೆಂಬ ಕಮಲ ಅರಳಲೆಂದು ಭಾರತ ಮಾತೆಗೆ ಪುಷ್ಪಾರ್ಚನೆಗೈದು , ತಿಲಕಧಾರಣೆ ಮಾಡಿಸಿ, ಹಿರಿಯರಿಂದ ಆರ್ಶೀವಾದ ಪಡೆದುಕೊಂಡರು.