ಎಂಬತ್ತು ದಾಟಿದ #ಯುವಕ!ನ ದಣಿವರಿಯದ ಹೋರಾಟ
ಕಲ್ಲಡ್ಕ ಶಾಲೆಯ ಸಂಸ್ಕಾರಯುತ ಶಿಕ್ಷಣದ ದೀಪ ಪ್ರದಾನ
#ಕಲ್ಲಡ್ಕ #ಕಥನ #ಭಾಗ-2
ಮೊನ್ನೆ ದೀಪ ಪ್ರದಾನ ಕಾರ್ಯಕ್ರಮಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ನಮ್ಮ ವಿಶ್ವವಾಣಿಯ ಸಂಪಾದಕರಾದ #ವಿಶ್ವೇಶ್ವರ ಭಟ್ಟರು ಮುಖ್ಯ ಅತಿಥಿ. ಪತ್ರಿಕೆ ಎಂದರೆ ಪ್ರಗತಿ ಪರ, ಎಡಚಿಂತನೆಯ ಬರಹಗಳಷ್ಟೇ ಅಂಕಣವಾಗಬಲ್ಲದು ಎಂದು ಬಲಪಂಥೀಯರೂ ತಿಳಿದುಕೊಂಡಿದ್ದ ಕಾಲ ಘಟ್ಟದಲ್ಲಿ ಬಲಪಂಥೀಯ, #ರಾಷ್ಟ್ರೀಯ ಚಿಂತನೆಯನ್ನು ಸಂಪಾದಕೀಯ ಪುಟಗಳಲ್ಲಿ ಅಗ್ರಸ್ಥಾನ ನೀಡಿದ್ದು ಮಾತ್ರವಲ್ಲದೆ
#ವಿಜಯಕರ್ನಾಟಕ ಪತ್ರಿಕೆಯಲ್ಲಿ ಎರಡು ದಶಕಗಳ ಹಿಂದೆ ವೇದಿಕೆ ನಿರ್ಮಿಸಿ ರಾಜ್ಯದಲ್ಲಿ ಅನೇಕ ರಾಷ್ಟ್ರೀಯ ಚಿಂತನೆಯ ಬರಹಗಾರರ ಅಭ್ಯುದಯಕ್ಕೆ ಕಾರಣವಾಗಿ ತಣ್ಣನೆಯ ಕ್ರಾಂತಿ ನಡೆಸಿದವರು.
ಅವರನ್ನು ಎದುರುಗೊಳ್ಳಲು ಹೋದ ನನ್ನನ್ನು ಬಹಳ ಪ್ರೀತಿಯಿಂದಲೇ ಕಲ್ಲಡ್ಕ ಪ್ರಭಾಕರ ಭಟ್ಟರು ಅತಿಥಿಯಾಗಿ ಪರಿವರ್ತಿಸಿ, ಎರಡು ಮಾತನಾಡಲು ಅವರೇ ಒತ್ತಾಯ ಮಾಡಿದರು.
ಶಾಲೆಯ #ವೈಶಿಷ್ಟ್ಯ ಬೆರಗು ಹುಟ್ಟಿಸುವಂತಿದೆ.работни обувки fw34 steelite lusum s1p 38
normamascellani.it
covorase man
bayern münchen spieler
karl sneakers
addobbi fai da te matrimonio
prestonstadler.com
spoločenské šaty pre moletky
fingateau.com
lifeonthevineministries.com
ಕಲ್ಲಡ್ಕದಲ್ಲೊಂದು ಕ್ರಮ ಇದೆ, ಕಾರ್ಯಕ್ರಮಕ್ಕೆ ಮುನ್ನ ಶಾಲೆಯ ತರಗತಿಗಳಿಗೆ ಮತ್ತು ಅಲ್ಲಿನ ವಿಶೇಷಗಳನ್ನು ತೋರಿಸಿ ಎಲ್ಲ ವಿವರಣೆ ಪ್ರಭಾಕರ ಭಟ್ಟರೇ ಹೇಳುತ್ತಾರೆ.
ಮೊನ್ನೆಯೂ ಹಾಗೆಯೇ ಕರೆದುಕೊಂಡು ಹೋಗುತ್ತಿದ್ದರು. ಅದರಲ್ಲಿ ಕೋಟ್ಯಧಿಪತಿಗಳು ಇದ್ದರು, ಜನಪ್ರತಿನಿಧಿಗಳೂ ಇದ್ದರು, ರಾಜಕೀಯ, ಸಾಹಿತಿಗಳೂ..
ಅಲ್ಲಿ ಯಾರೋ ಇಬ್ಬರು ತಮ್ಮ ತಮ್ಮೊಳಗೆ ಮಾತನಾಡುತ್ತಿದ್ದರು_
ತಕ್ಷಣ ಕಂಚಿನ ಕಂಠ “ಯಾರೂ ಮಾತಾಡಬೇಡಿ”… ಗಪ್ ಚಿಪ್ !
ವೇದಿಕೆಯಲ್ಲೂ ಕೂಡಾ ಅಷ್ಟೇ… ನೇರಾ ನೇರ.. ತಪ್ಪು ಮಾಡಿದರೆ ಮುಖಕ್ಕೆ ಹೊಡೆದಂತೆ ಮಾತು.
ತರಗತಿಗಳಿಗೆ ವಿಸಿಟ್ ಮಾಡುತ್ತಿದ್ದಾಗ 2ನೇ, 3 ನೇತರಗತಿಯೋ ಗೊತ್ತಿಲ್ಲ. ಬಾಲಕಿ ಎಲ್ಲ ಅತಿಥಿಗಳಿಗೆ ಹೆಸರು ಹುದ್ದೆ ಸಹಿತ ಹೇಳಿ ಸ್ವಾಗತಿಸಿದಳು!
ಬಳಿಕ ಒಬ್ಬೊಬ್ಬರನ್ನು ನೋಡುತ್ತಾ ನನ್ನ ಮುಖ ನೋಡಿ ನನ್ನ ಹೆಸರಿನ ಜತೆ ಖ್ಯಾತ #ಅಂಕಣಕಾರರು ಎಂದಾಗ ನನಗೇ ಅಚ್ಚರಿ ಜತೆ ರೋಮಾಂಚನವೂ ಆಗಿತ್ತು !
ಸಮಾರಂಭದ ವೇದಿಕೆಯಲ್ಲಿ ಉದ್ಘಾಟನೆಗೆ ಮುನ್ನ ಇಬ್ಬರು ಹೆಣ್ಣು ಮಕ್ಕಳು ಬಂದು #ಪದ್ಮಾಸನ ದಲ್ಲಿ ಕೂತು ಮಂತ್ರ ಹೇಳುತ್ತಾ ಹೋಮಕ್ಕೆ ಹವಿಸ್ಸು ಸುರಿದರು. ಶ್ಲೋಕ, ಭಜನೆ ಪಠಿಸಿದರು. ಸಮಾರಂಭದಲ್ಲಿ ಮಕ್ಕಳದೇ ನೇತೃತ್ವ. ಕಾರ್ಯಕ್ರಮ ನಿರೂಪಣೆ, ಸ್ವಾಗತ,
ಯಾರ ಕೈಯಲ್ಲೂ ಚೀಟಿಯೂ ಇಲ್ಲ, ಆಹ್ವಾನ ಪತ್ರಿಕೆಯೂ ಇಲ್ಲ. ತಲೆಯಲ್ಲಿ ಪ್ರೋಗ್ರಾಂ ಅಳವಡಿಸಿದಂತೆ ಒಂದೊಂದೇ ಶಬ್ದಗಳನ್ನು ಹೇಳುತ್ತಾ ಅದ್ಬುತ #ಜ್ಞಾಪಕ ಶಕ್ತಿಯನ್ನು ಬಳಸಿಕೊಂಡು… ಹೊಸ ಸಾಧ್ಯತೆಗಳನ್ನು ನಮಗೆ ತೋರಿಸಿದರು.
ಎಲ್ ಕೆಜಿ, ಯುಕೆಜಿಗಳ ಹೋಲುವ ಶಿಶು ವಿಹಾರ ಇಲ್ಲಿದೆ. ಅಲ್ಲಿ ಮಕ್ಕಳ ಸೈಕಾಲಜಿ, ಮನೋ ವಿಜ್ಞಾನ ಅಧ್ಯಯನ ನಡೆಸಿದ ಬಳಿಕ ರೂಪಿಸಿದ ಪಠ್ಯ ಕ್ರಮ ಇದೆ.
ಪಾಶ್ಚಿಮಾತ್ಯ
ಮಾಂಟೆಸ್ಸೆರಿ ಮತ್ತು ಇಲ್ಲಿನ ಸಂಸ್ಕಾರ, ನೀತಿ ಶಿಕ್ಷಣ ಅಧ್ಯಯನ ಮಾಡಿದ ಉಪೇಂದ್ರ ಶೆಣೈ ಅವರ ತಂಡ ರೂಪಿಸಿದ ಪಠ್ಯಕ್ರಮ !
ಆನೋ ಭದ್ರಾಃ ಕೃತವೋ ಯಂತು ವಿಶ್ಚತಃ..
ಒಳ್ಳೆಯದು ಎಲ್ಲೆಡೆಯಿಂದ ಬರಲಿ ಎನ್ನುವುದು ನಮ್ಮ ಆಶಯ ಹೀಗಾಗಿ ಪಾಶ್ಚಿಮಾತ್ಯ ಮಾಂಟೆಸ್ಸೆರಿ ಶಿಕ್ಷಣದ ಒಳ್ಳೆಯ ಅಂಶಗಳನ್ನು ಬಳಸಿಕೊಳ್ಳುತ್ತೇವೆ ಎನ್ನುತ್ತಾರೆ ಕಲ್ಲಡ್ಕ ಭಟ್ಟರು..
ಹಾಗಂತ ಮೆಕಾಲೆ ಶಿಕ್ಷಣಕ್ಕೆ ಸಂಪೂರ್ಣ ವಿರೋಧ!
ಹೋಮ್ ವರ್ಕ್ ಇಲ್ಲ!
ಇಲ್ಲಿ ಮಕ್ಕಳಿಗೆ, ಹೆತ್ತವರಿಗೆ ಹೋಮ್ ವರ್ಕ್ ಇಲ್ಲ, ಶಿಕ್ಷಕಿಯರಿಗೆ( ಮಾತಾಜಿ) ಹೋಮ್ ವರ್ಕ್!
ಇಂತಹ ಸಂಸ್ಕಾರ ರೂಪಿಸುವ ಮತ್ತು ಸಂಘಟನಾ ಶಕ್ತಿಯ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸುತ್ತೇವೆ ಎಂಬ ಹೇಳಿಕೆಗಳು ಎದುರಾಳಿಗಳು ಹೇಳುತ್ತಲೇ ಬಂದವರು, ಒಮ್ಮೆಯೂ ಈಡೇರಿಲ್ಲ !
ಮಕ್ಕಳ ಅನ್ನಕ್ಕೆ ಕೈ ಹಾಕಿದಾಗಲೇ ಆದ ಅನಾಹುತ ಅವರು ಮರೆತಿಲ್ಲ. ಇಂತಹ ಭಟ್ಟರು ಯಾರ ತಲೆ ಮೇಲೆ ಕೈ ಇಟ್ಟರೋ ಅವರು ಎಂಪಿಗಳಾದರು, ಶಾಸಕರಾದರು.
(ಅಧಿಕಾರ ಬಂದಾಗ ಮರೆತವರೂ ಇದ್ದಾರೆ ಬಿಡಿ.)
ನಾವು ಹಿಂದುತ್ದ ಸಿಪಾಯಿಗಳು ನಮಗೆ ಯಾರೂ ಹಿಂದುತ್ವ ಕಲಿಸಬೇಡಿ ಎಂದು ಹೇಳಿಕೊಳ್ಳುವ ಇತ್ತೀಚಿನ ರಾಜಕಾರಣಿಗಳು ಕಲ್ಲಡ್ಕ ಭಟ್ಟರಂತಹ ಹಿರಿಯ ನಾಯಕರ ಹಿಂದುತ್ವದ ಪರಿಣಾಮ, ಅಧಿಕಾರ ಅನುಭವಿಸುತ್ತಿರುವುದು ಅವರು ಕಟ್ಟಿದ ಕಾರ್ಯಕರ್ತರ ನಿಸ್ವಾರ್ಥ ಪಡೆಯಿಂದ ಎನ್ನುವುದನ್ನು ತಿಳಿದುಕೊಳ್ಳಬೇಕು.
ಹಿಂದುತ್ವv/s ಬಿಜೆಪಿ.?
ಹಿಂದುತ್ವದ ಸೇನಾ ಪಡೆಯಲ್ಲಿ ಬದುಕು ಸವೆಸಿದ ಅನೇಕ ನಾಯಕರು ಈಗ ಬಹುತೇಕ ಬದುಕು ತ್ಯಾಗ ಮಾಡಿದ್ದಾರೆ, ಬದುಕಿನ ಉಳಿದ ಭಾಗದಲ್ಲಾದರೂ ಗೌರವ ಸ್ಥಾನ ಮಾನವಾದರೂ ನೀಡುವುದು ರಾಜಕೀಯದಲ್ಲಿದ್ದು ಅಧಿಕಾರ ಅನುಭವಿಸುತ್ತಿರುವವರ ಕರ್ತವ್ಯ.
ದೇವ- ದಾನವ ಕಲಹ ಬೇಡ:
ಹಿಂದುತ್ವ ಹೋರಾಟ ನಾಯಕರು ಮತ್ತು ರಾಜಕೀಯ ಪಕ್ಷ ಬಿಜೆಪಿಯ ನಾಯಕರ ನಡುವೆ ಈಗ ದಾಯಾದಿ ಕಲಹ ಕಾಣುತ್ತಿದೆ..
ಕಶ್ಯಪ ಋಷಿಯ ಪತ್ನಿಯರಾದ ದಿತಿ ಮಕ್ಕಳು ದೈತ್ಯರು (ರಾಕ್ಷಸರು) ಅಧಿಕಾರ ವಂಚಿತರಾಗಿ ಹೋರಾಡುವುದು ಅದಿತಿಯ ಮಕ್ಕಳು ಸುರರು( ದೇವತೆಗಳು) ಸ್ವರ್ಗ ಸಿಂಹಾಸನದ ಸುಖ ಅನುಭವಿಸುವ ಕಥೆಯಂತೆ ಇಲ್ಲೂ ಆಗಬಾರದು.
ಹಿಂದುತ್ವ ನಾಯಕರೇ ಈಗ ಹಲವೆಡೆ ಸಂಘದ ರಾಜಕೀಯದ ಮುಖವಾಗಿರುವ ಬಿಜೆಪಿ ನಾಯಕರ ವಿರುದ್ಧ ಸ್ಪರ್ಧೆಗೆ ನಿಲ್ಲುತ್ತಿರುವದು ದೇವ- ದಾನವರ ಸಾಂಪ್ರದಾಯಿಕ ಯುದ್ಧದ ರೀತಿ ಸಾಗಬಹುದೇ ಎಂಬ ಸಾಧ್ಯತೆ ಕಾಣುತ್ತಿದೆ…
ಈಗ ಜನಪ್ರತಿನಿಧಿ ನಿರ್ಮಾಣದ ರಾಜಕೀಯದ ಶಾಖೆಯಿಂದ ಅಂತರ ಕಾಯ್ದುಕೊಂಡಿದ್ದರೂ ರಾಜ್ಯದ ಅತ್ಯಂತ ಪ್ರಭಾವಿಗಳಲ್ಲಿ ಒಬ್ಬೊರಾಗಿರುವ ಕಲ್ಲಡ್ಕ ಭಟ್ಟರಿಗೆ ಇನ್ನಷ್ಟು ಆಯುರಾರೋಗ್ಯ ವೃದ್ಧಿಸಲಿ.
–
ಜಿತೇಂದ್ರ ಕುಂದೇಶ್ವರ
9945666324