#ಕಲ್ಲಡ್ಕ #ಪ್ರಭಾಕರ #ಭಟ್…*
_ಸಂಘಟನೆಯಿಂದ ಶಕ್ತಿ ಎನ್ನುವುದನ್ನು ಸಾಧಿಸಿ ತೋರಿಸಿ ಇದೀಗ ವ್ಯಕ್ತಿಯೇ ಪ್ರಖರ ಶಕ್ತಿಯಾಗಿ ಪ್ರಜ್ವಲಿಸಿದವರು..
ಕಲ್ಲಡ್ಕ ಭಟ್ಟರ ಕುರಿತು ಬಹಳ ಕೇಳಿದ್ದರೂ ಪತ್ರಕರ್ತನಾಗಿ ನಾನು ಅಂತರದಲ್ಲಿಯೇ ಇದ್ದವನು. ಮೊದಲ ಭೇಟಿ ಹತ್ತು ವರ್ಷಗಳ ಹಿಂದೆ..
ಸೀತಾರಾಮ ಕೆದಿಲಾಯರ 25 ಸಾವಿರ ಕಿ.ಮೀ ನಡೆದೇ ಭಾರತ ಪರಿಕ್ರಮ ಯಾತ್ರೆ ಮಂಗಳೂರಿಗೆ ಬಂದಾಗ.
ನಾನು #ಕನ್ನಡಪ್ರಭ ದಲ್ಲಿದ್ದೆ. ಸಿಕ್ಕಿದ 7-8 ನಿಮಿಷದಲ್ಲಿ ಕಲ್ಲಡ್ಕ ಭಟ್ರ ಸಂದರ್ಶನ ಮಾಡಿದ್ದೆ, ಸಂಪಾದಕ ವಿಶ್ವೇಶ್ವರ ಭಟ್ಟರು ರಾಜ್ಯಪುಟದಲ್ಲಿ ಪ್ರಕಟಿಸಿದ್ರು.
ನನ್ನ ಬಳಿ ಕಲ್ಲಡ್ಕ ಭಟ್ಟರು ಹೇಳಿದ್ದು ಈಗಲೂ ಅಸ್ಪಷ್ಟ ನೆನಪಿದೆ..
ಸಂದರ್ಶನ ಅಂಥ ಕೊಟ್ಟಿರೋದು ಮೊದಲು! (ಅವರು ಹೇಳಿದ್ದನ್ನು ತಪ್ಪಾಗಿ ತಿಳಿದುಕೊಂಡಿದ್ದೇನೋ ಗೊತ್ತಿಲ್ಲ)
ಬಳಿಕ ಬೆರಳೆಣಿಕೆಯ ಕಾರ್ಯಕ್ರಮಗಳಲ್ಲಿ ಸಿಕ್ಕಿದ್ರು. ಅವರನ್ನು ಕಚೇರಿಯಲ್ಲಿ ಭೇಟಿ ಕೊಟ್ಟದ್ದು ತೀರಾ ಇತ್ತೀಚೆಗೆ. ಸ್ಪಂದನವಾಹಿನಿಯ ತಿರುಗುಬಾಣ ಸಂದರ್ಶನಕ್ಕೆ ಬನ್ನಿ ಎಂದು ಕರೆಯಲು ಹೋಗಿದ್ದೆ. ಅದಾದ ಮರುದಿನವೇ ಅವರಿಗೆ ಲಘು ಹೃದಯಾಘಾತ ಆಗಿತ್ತು.работни обувки fw34 steelite lusum s1p 38
normamascellani.it
covorase man
bayern münchen spieler
karl sneakers
addobbi fai da te matrimonio
prestonstadler.com
spoločenské šaty pre moletky
fingateau.com
lifeonthevineministries.com
ಅವರು ಗುಣಮುಖರಾದ ವಿಷಯ ತಿಳಿದಕೂಡಲೇ
ಭಟ್ಟರು ಆರೋಗ್ಯವಾಗಿದ್ದಾರೆ ಎಂದು ಫೇಸ್ ಬುಕ್ಕಲ್ಲಿ ಹಾಕಿದ ಒಂದು ಪೋಸ್ಟ್‌ಗೆ #ಪರಗತಿ ಪರರು, ಮಾಜಿ ಪತ್ರಕರ್ತರು ಕೆಂಡ ಕಾರಿದ್ದರು.
ಆರೋಗ್ಯವಾಗಿದ್ದಾರೆ ಎನ್ನುವುದು ಅನಾರೋಗ್ಯ ಪತ್ರಿಕೋದ್ಯಮ ಎಂದು ಹೇಳಿ ಹಳಿದಿದ್ದರು…
ಮತ್ತೆ ಭಟ್ಟರನ್ನು ಕಚೇರಿಯಲ್ಲಿ ಭೇಟಿ ಮಾಡಿದ್ದು ಮೊನ್ನೆ ಕಲ್ಲಡ್ಕ ಶಾಲೆಯ ದೀಪ ಪ್ರದಾನ ಕಾರ್ಯಕ್ರಮದಲ್ಲಿ…
ಎಲ್ಲ ನೋಡಿದ ಮೇಲೆ ಅವರ ಕುರಿತು #ಒಂದಿಷ್ಟು ಬರೆಯಬೇಕು ಎಂದು ಅನಿಸಿತು
ರಾಮಮಂದಿರವೂ ಶ್ರೀರಾಮ ಕೇಂದ್ರವೂ !:
…
6 ದಶಕಗಳ ಹಿಂದೆ ಪ್ರಭಾಕರ ಭಟ್ರು ಮತ್ತು ಅವರ #ಧರ್ಮಪತ್ನಿ ಡಾ. ಕಮಲಾ ಭಟ್ ಇಬ್ರು ಡಾಕ್ಟ್ರು..
ಅದೇ ಈಗೆಲ್ಲ ಕೊಡುವ ಪೇಮೆಂಟ್ ಕೋಟಾದ ಗೌ ಡಾ! ಗಳಲ್ಲ.. ಎಂಬಿಬಿಎಸ್ ಕಲಿತು ವೈದ್ಯರಾದವರು.
ಬಳಿಕ ಅವರು #ಹಿಂದೂ ಸಮಾಜದಲ್ಲಿ ಕಾಡುತ್ತಿದ್ದ ಕಾಯಿಲೆಗಳ ವಾಸಿ ಮಾಡುವ ಡಾಕ್ಟರ್ ಆಗಿ ಪ್ರಸಿದ್ಧರಾದರು !
ಹಿಂದುತ್ವದ #ಒಗ್ಗಟ್ಟಿಗೆ ಕಾರಣವಾದ ಅಯೋಧ್ಯಾ ರಾಮಮಂದಿರ ನಿರ್ಮಾಣದ #ಇಟ್ಟಿಗೆ ಪೂಜೆ ಎಂಬ ಕ್ರಾಂತಿಗೆ ಕರ್ನಾಟಕದಲ್ಲಿ ಮುಂಚೂಣಿಯಲ್ಲಿದ್ದವರು ಕಲ್ಲಡ್ಕ ಭಟ್ಟರು.
ವಿಶೇಷ ಎಂದರೆ
#ಅಯೊಧ್ಯೆಯ #ರಾಮಮಂದಿರ ಶಂಕುಸ್ಥಾಪನೆಗೆ ಸಾಕ್ಷಿಯಾದ #ಪೇಜಾವರಶ್ರೀಗಳು ಅದಕ್ಕಿಂತ ಮುಂಚೆ ಕಲ್ಲಡ್ಕದ ರಾಮಮಂದಿರಕ್ಕೆ #ಶಂಕುಸ್ಥಾಪನೆ ಮಾಡಿದ್ದರು !
3 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣದ ಜತೆ ಮಧ್ಯಾಹ್ನ ಬಿಸಿಯೂಟ.. ಈಗಿನ ಶಾಲೆಯ #ಬಿಸಿಯೂಟ ಪರಿಕಲ್ಪನೆಯೇ ಇಲ್ಲದ ಕಾಲದಲ್ಲಿ ಕಲ್ಲಡ್ಕ ಶಾಲೆಯಲ್ಲಿ ಬಿಸಿಯೂಟದ ಜತೆ ಜತೆಗೆ ದೇಶ ಕಟ್ಟುವ ರಾಷ್ಟ್ರೀಯತೆಯ ಶಿಕ್ಷಣವೂ ಆರಂಭವಾಗಿತ್ತು. ಇದರೊಳಗೆ ಮಣ್ಣಿನ ಸಂಸ್ಕಾರ, ಸಂಸ್ಕೃತಿಯೂ ಇತ್ತು.
ಇದರೊಂದಿಗೆ ಉಚಿತ #ಸಮವಸ್ತ್ರ, ಅದ್ಭುತ #ಕ್ರೀಡೋತ್ಸವ…
ಬುದ್ಧಿಜೀವಿಗಳು ಜಾತ್ಯತೀತವಾದಿಗಳು ಇವರನ್ನು #ಕೋಮವಾದ ಫ್ಯಾಕ್ಟರಿ #ನಿರ್ಮಾತೃ ಎಂದು ಜರೆಯಲಿ..
*ಈಗಿನ ಕಾಲದಲ್ಲಿ 1ನೇ ಕ್ಲಾಸ್ ಫೀಸ್ ಕಟ್ಟದೆ #ಯುಕೆಜಿ ರಿಸಲ್ಟ್ ತೋರಿಸೋದಿಲ್ಲ ಎನ್ನುವ ನಿಯಮ ಮಾಡುವ, ಮಕ್ಕಳ ಊಟಕ್ಕೆ ಫೀಸ್ ಫಿಕ್ಸ್ ಮಾಡುವಾಗ #ಕಮಿಷನ್ ಪಡೆಯುವ,
ಅಪ್ಲಿಕೇಶನ್ ಜತೆಗೆ #ಡೋನೇಶನ್ ಪೀಕುವ ! ಶಿಕ್ಷಣ ಕ್ರಾಂತಿಯ ಬ್ರ್ಯಾಂಡ್ #ಅಂಬಾಸಿಡರ್ ಗಳಂತೆ ಮೆರೆಯುವ ಖಾಸಗಿ ಇಂಗ್ಲಿಷ್ #ಮೀಡಿಯಂ ಸ್ಕೂಲ್‌ಗಳ ಕೋಟಿ ಕೋಟಿ ಲಾಭದ ಅತ್ಯದ್ಭುತ ಫರ್ ಫಾರ್ಮೆನ್ಸ್ ತೋರಿಸುತ್ತಿರುವ ಕಾಲ ಘಟ್ಟದಲ್ಲಿ…
ಕಲ್ಲಡ್ಕ ಭಟ್ಟರು ದಾನಿಗಳ ಮೂಲಕ ಸಾವಿರ ಸಾವಿರ ಮಕ್ಕಳಿಗೆ ಉಚಿತ ಬಿಸಿಯೂಟ ನೀಡಿದರು, ಉಚಿತ ಶಿಕ್ಷಣ ನೀಡಿದರು ಎನ್ನುವುದು ಉಲ್ಲೇಖನೀಯ !
*ಭಟ್ಟರು ಕಟ್ಟಿದ ಸಂಘಟನೆಯ ಯುವಕರು ಹಿಂದುತ್ವದ ಕೋಟೆ ರಕ್ಷಣೆಗಾಗಿ ಹೋರಾಟ ಮಾಡುತ್ತಾರೆ ಈ ರಕ್ಷಣಾ ಪಡೆಯನ್ನು ಎದುರಾಳಿಗಳು ಎದುರಿಸಬಹುದು, ಎದುರಿಸಿದ್ದಾರೆ, ಕೆಲವೊಮ್ಮೆ ಗೆದ್ದಿದ್ದಾರೆ.
ಆದರೆ ಶ್ರೀರಾಮ ವಿದ್ಯಾಕೇಂದ್ರ ಒಳಗಿಂದ ಪ್ರತಿ ವರ್ಷ ಹೊರಬರುವ ಸಾವಿರ, ಸಾವಿರ ವಿದ್ಯಾರ್ಥಿಗಳಿದ್ದಾರಲ್ಲಾ… ಅಲ್ಲಿ ಪಡೆಯುವ #ಸಂಸ್ಕಾರ, ದೇಶ ಭಕ್ತಿ ಎಂಬ #ಪ್ರೋಗ್ರಾಂ ಮಿದುಳಲ್ಲಿ #ಫೀಡ್ ಆದ ಬಳಿಕ ಆ ಸೇನೆಯನ್ನು ಯಾವ ಎದುರಾಳಿಗಳಿಗೂ ಒಡೆಯಲು ಸಾಧ್ಯವಾಗುವುದಿಲ್ಲ !*
ಅದು “ನೈನಂ ಛಿಂದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕಃ.” ಗೀತೆಯಲ್ಲಿ ಹೇಳಿದಂತೆ ಆ ಮನೋನಿಯಾಮಕ ಸಂಸ್ಕಾರ ವನ್ನು ಶಸ್ತ್ರಗಳಿಂದ ಒಡೆಯಲು ಸಾಧ್ಯವಿಲ್ಲ. ಬೆಂಕಿಯಿಂದ ಸುಡಲು ಸಾಧ್ಯವಿಲ್ಲ !
ಈ ಕಾರಣಕ್ಕಾಗಿಯೇ 2018ರಲ್ಲಿ #ಕಾಂಗ್ರೆಸ್ ಸರಕಾರ, ಈ ಶಾಲೆಯ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಕೊಲ್ಲೂರು ಕ್ಷೇತ್ರದಿಂದ ಆಹಾರಧಾನ್ಯಗಳು ಬರುವ ವ್ಯವಸ್ಥೆಗೇ ಕತ್ತರಿ ಹಾಕಿತು.
ಅದು ಸರಕಾರಕ್ಕೆ ದೊಡ್ಡ ಪೆಟ್ಟು. ಕರಾವಳಿಯಲ್ಲಿ ಏಕಾಂಗಿಯಾಗಿ ರಣಕಹಳೆ ಊದಿದ ಕಲ್ಲಡ್ಕ ಭಟ್ಟರು ಸಂಗ್ರಾಮವನ್ನೇ ಸಾರಿ, ಕಾಂಗ್ರೆಸಿಗರನ್ನು ಧೂಳಿಪಟ ಮಾಡುವಲ್ಲಿ ತಮ್ಮ ದೊಡ್ಡ ಕಾಣಿಕೆ ನೀಡಿದ್ದರು. ಈ ಬಾರಿ ಶಾಂತವಾಗಿದ್ದಾರೆ.
ಶಾಲೆಯಲ್ಲಿ
ಅಲ್ಲಿ ವರ್ಷಂಪ್ರತಿ ಅದ್ಭುತ #ಕ್ರೀಡೋತ್ಸವ ಹೊನಲು ಬೆಳಕಿನಲ್ಲಿ ನಡೆಯುತ್ತದೆ. ಮೊನ್ನೆಯೂ ವಿಶೇಷ ಆಹ್ವಾನಿತರಾದ ವಿಶ್ವವಾಣಿ ಸಂಪಾದಕರಾದ #ವಿಶ್ವೇಶ್ವರ ಭಟ್, ಕೋಲಾರ ಸಂಸದ ಮುನಿಸ್ವಾಮಿ ಮೊದಲಾದ ಅತಿಥಿಗಳ ಮುಂದೆ ಕ್ರೀಡೋತ್ಸವದ ಝಲಕ್ ತೋರಿಸಿದರು.
ಹುಡುಗರ ಕಸರತ್ತುಗಳು ಒಂದೆಡೆಯಾದರೆ ಹುಡುಗಿಯರು ಬಾಟಲಿಗಳ ಮೇಲೆ ಮಾಡುವ ಯೋಗ ಅಬ್ಬಾ… ಒಂದಕ್ಕಿಂತ ಒಂದು ಅದ್ಭುತ ! ಸಂಸ್ಕಾರವೂ ಅಷ್ಟೇ..
ಅದನ್ನು ಮುಂದಿನ ಲೇಖನದಲ್ಲಿ ಹೇಳುತ್ತೇನೆ.
ಜಿತೇಂದ್ರ ಕುಂದೇಶ್ವರ
9945666324