• 08255 – 275073
  • info@shriramakalladka.in

‘ಕೆಡ್ಡಸ’ ಎಂಬುದು ಮನನ ಮಾಡಿಕೊಳ್ಳುವ ಆಚರಣೆಯಾಗಬೇಕೇ ಹೊರತು, ಮರೆತು ಹೋಗುತ್ತಿರುವ ಆಚರಣೆಯಾಗಬಾರದು

ದಿನಾಂಕ 12.02.2022ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಡ್ಡಸ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ತುಳಸಿಕಟ್ಟೆಯ ಮುಂದೆ ಗೋಮಯದಿಂದ ಶುದ್ಧೀಕರಿಸಿ, ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸಿ, ಭೂಮಿ ದೇವಿಯ ಸಾನಿಧ್ಯ ರಚಿಸಿ, ದೀಪಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಕಾಯಿ, ಅರಶಿನ- ಕುಂಕುಮ, ಪಚ್ಚೆ ಹಸಿರಿನ ಹುಡಿ, ವೀಳ್ಯೆದೆಲೆ ಇತ್ಯಾದಿಗಳನ್ನು ಭೂಮಿ ದೇವಿಯ ಸ್ನಾನಕ್ಕೋಸ್ಕರ ಇಟ್ಟು ಹುರುಳಿ, ಹೆಸರು ಕಾಳು, ಒಣಕೊಬ್ಬರಿ, ಕಡಲೆಕಾಯಿಗಳ ಮಿಶ್ರಣ(ನನ್ನೇರಿ) ಇದರೊಂದಿಗೆ ತುಳುನಾಡಿನ ವಿವಿಧ ಭಕ್ಷ್ಯಗಳನ್ನು(ಸಾರ್ನಡ್ಡೆ) ಊರಿನ ಹಿರಿಯ ತಾಯಿಯಾದ ಜಯಂತಿಯವರು ಭೂಮಿಗೆ ಎಣ್ಣೆ ಹಾಲು ಹಾಕಿ ಬಡಿಸಿದರ. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|ಪ್ರಭಾಕರ್ ಭಟ್ ಕಲ್ಲಡ್ಕ ಹಾಗೂ ಸಹಧರ್ಮಿಣಿಯಾದ ಡಾ| ಕಮಲಾ ಪ್ರಭಾಕರ್ ಭಟ್ ಹಾಗೂ ಪೋಷಕರಾದ ಯಶಸ್ವಿನಿ ಜೊತೆಗಿದ್ದರು. ಅಧ್ಯಾಪಕ ವೃಂದದವರು ಹಾಗೂ ಶಾಲಾ ಸಹಾಯಕಿ ಸುಮತಿ ಸಹಕರಿಸಿದರು.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಬಾಲಕೃಷ್ಣ, ಕೆಡ್ಡಸದ ಮಹತ್ವ ತಿಳಿಸುತ್ತಾ, ತುಳುನಾಡಿನಲ್ಲಿ ವಾರ್ಷಿಕಾವರ್ತನದಲ್ಲಿ ಆಚರಣೆಯಾಗುವ ಒಂದು ಹಬ್ಬ. ಪೂರ್ವಿಕರು ಭೂಮಿಯನ್ನು ಹೆಣ್ಣೆಂದೇ ಪರಿಗಣಿಸಿ ಆರಾಧಿಸಿದವರು. ಅವರ ಎಲ್ಲಾ ಆಚರಣೆಯಲ್ಲೂ ಪ್ರಕೃತಿ ಪ್ರೇಮ, ಅಂತಃಕರಣ, ಮಾನವೀಯ ಸಂಬಂಧಗಳು ಎದ್ದು ಕಾಣುತ್ತದೆ. ಕೆಡ್ಡಸ ಆಚರಣೆಯನ್ನು ಭೂಮಿ ತಾಯಿಯ ಮೀಯುವ ಹಬ್ಬವೆಂದು ಕರೆದು ಭೂಮಿಯನ್ನು ಸಾಮಾನ್ಯ ಸ್ತ್ರೀಯೆಂಬಂತೆ ಅವರು ಪರಿಭಾವಿಸಿದ್ದಾರೆ. ಹೆಣ್ಣಿನಂತೆ ಭೂಮಿಯು ಮುಟ್ಟಾಗುತ್ತಾಳೆಂದು ಪರಿಗಣಿಸಿ, ಆ ನಂಬಿಕೆಯ ಪ್ರಕಾರ ಅವಳನ್ನು ಮಡಿಗೊಳಿಸುವ ದಿನವೆಂದು ಈ ಆಚರಣೆಯನ್ನು ನಡೆಸುತ್ತಾರೆ. ಕೆಡ್ಡಸ ಹಬ್ಬವನ್ನು ಶುರು ಕೆಡ್ಡಸ, ನಡು ಕೆಡ್ಡಸ ಹಾಗೂ ಕಡೆ ಕಡ್ಡಸ ಎಂದು ಮೂರು ದಿನ ಆಚರಿಸುತ್ತಾರೆ. ಈ ಮೂರು ದಿನ ನಡೆಯುವ ಹಬ್ಬದ ಆಚರಣೆಯಲ್ಲಿ ನೆಲ ಅಗೆಯುವುದು, ಮರಗಳನ್ನು ಕಡಿಯುವುದು ನಿಷಿದ್ದ. ಯಾಕೆಂದರೆ ಭೂಮಿ ರಜೋಮಯವಾಗಿರುವುದರಿಂದ ಕೃಷಿಕಾರ್ಯದಲ್ಲಿ ತೊಡಗಿದರೆ ಭೂಮಿಗೆ ನೋವಾಗುತ್ತದೆ ಎಂಬ ನಂಬಿಕೆಯಿದೆ. ಕೆಡ್ಡಸದ ಸಮಯದಲ್ಲಿ ಮೂಡಣ ದಿಕ್ಕಿನಿಂದ ಒಂದು ವಿಲಕ್ಷಣವಾದ ಗಾಳಿ ಬೀಸುತ್ತದೆ. ಇದನ್ನು ಕೆಡ್ಡಸದ ಗಾಳಿ ಎಂದು ಕರೆಯುತ್ತಾರೆ. ಈ ಸಂದರ್ಭ ಋತುಸ್ನಾನ ಮುಗಿಸಿರುವ ಭೂಮಿದೇವಿಯು ಈ ಗಾಳಿಯಿಂದ ಪುಳಕಗೊಂಡು ಫಲವತಿಯಾಗಲು ಸಜ್ಜಾಗುತ್ತಾಳೆ ಎಂಬ ನಂಬಿಕೆಯಿದೆ. ಪಕೃತಿ ಮಾತೆಯಾದ ಭೂಮಿದೇವಿಯನ್ನು ಪೂಜಿಸುವ ಈ ಹಬ್ಬವು ಇಂದು ಸಂಪೂರ್ಣ ಮರೆತುಹೋಗುತ್ತಿರುವುದು ಖೇದಕರ ಸಂಗತಿಯನ್ನು ತಿಳಿಸುತ್ತಾ ನಮ್ಮ ಮನೆ-ಮನೆಗಳಲ್ಲಿ ಆಚರಣೆಯನ್ನು ಆಚರಿಸುವುದು ಮರೆತುಹೋದಲ್ಲಿ ಮುಂದೊಂದು ದಿನ ಶ್ರೀರಾಮ ಶಾಲೆ ಅಥವಾ ‘ಗೂಗಲ್’ನಲ್ಲಿ ಹುಡುಕಿ ಹಬ್ಬಗಳ ಬಗ್ಗೆ ತಿಳಿಯುವ ಸಂದರ್ಭ ಬರಬಹುದೇನೋ ಅನ್ನಿಸುತ್ತದೆ. ಇನ್ನಾದರೂ ನಮ್ಮ ಪೂರ್ವಿಕರು ಹಬ್ಬ ಹರಿದಿನಗಳಿಗೆ ನೀಡಿದ ಮಹತ್ವ, ಹಿನ್ನಲೆಯನ್ನು ಅರಿತು ಅವುಗಳನ್ನು ಸಾಧ್ಯವಾಗುವ ಮಟ್ಟಿಗೆ ಆಚರಿಸಲು ಪ್ರಯತ್ನ ಪಡೋಣ, ಎಲ್ಲರೂ ನಿಮ್ಮ ನಿಮ್ಮ ಮನೆಗಳಲ್ಲೂ ಈ ಹಬ್ಬವನ್ನು ಆಚರಿಸಿ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು


ಅತಿಥಿಗಳಿಗೆ ಎಲೆ – ಅಡಿಕೆ ನೀಡಿ ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು. ನಂತರ ೭ನೇ ತರಗತಿಯ ವಿದ್ಯಾರ್ಥಿನಿಯರು ಕೆಡ್ಡಸ ಕುರಿತಾದ ಹಾಡು ಹಾಡಿದರು. ಕಾರ್ಯಕ್ರಮದಲ್ಲಿ ಅಕ್ಷರ ಕೋಚಿಂಗ್ ಸೆಂಟರ್ ವತಿಯಿಂದ ನಡೆದ ಚಿತ್ರಕಲೆ ಹಾಗೂ ಚೆಸ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಕೆಡ್ಡಸದ ವಿಶೇಷ ತಿನಿಸಾದ ನವವಿಧದ ಧಾನ್ಯಗಳಿಂದ ತಯಾರಿಸಿದ ನನ್ನೇರಿಯನ್ನು ಅತಿಥಿಗಳಿಗೆ ಮತ್ತು ವಿದ್ಯಾಥಿಗಳಿಗೆ ಹಂಚಲಾಯಿತು. ನನ್ನೇರಿ(ಕುಡು-ಅರಿ)ಯನ್ನು ತಿನ್ನುವುದರಿಂದ ದೇಹದಲ್ಲಿ ಸಮಶೀತೋಷ್ಣವನ್ನು ಕಾಯ್ದುಕೊಂಡು ನೀರಿನ ಸಮತೋಲನ ಹಾಗೂ ಮೂಳೆಗಳು ಗಟ್ಟಿಮಾಡಲು ಸಹಾಯವಾಗುತ್ತದೆ ಎಂಬ ವೈಜ್ಞಾನಿಕ ಹಿನ್ನಲೆಯನ್ನು ಹೊಂದಿದೆ.
ವೇದಿಕೆಯಲ್ಲಿ ಶ್ರೀರಾಮ ಪದವಿಪೂರ್ವ ವಿಭಾಗದ ಭೌತಶಾಸ್ತ್ರ ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ಹಾಗೂ ರಸಾಯನಶಾಸ್ತ್ರ ಉಪನ್ಯಾಸಕ ಅಭಿಲಾಷ್ ಆಳ್ವ, ಪೋಷಕರಾದ ಭಾರತಿ, ಲತಾ, ಶ್ರೀದೇವಿ ಹಾಗೂ ಸಂಸ್ಕೃತ ಅಧ್ಯಾಪಕರಾದ ಅನ್ನಪೂರ್ಣ ಎನ್ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಧ್ಯಾಪಕರಾದ ಸುಮಂತ್ ಆಳ್ವ ಸ್ವಾಗತಿಸಿ, ಕಾವ್ಯಶ್ರೀ ನಿರೂಪಿಸಿ, ರೇಷ್ಮಾ ವಂದಿಸಿದರು.

 

Institutions

Sri Rama Vidyakendra Trust (R.)

Know More

Sri Rama Degree College – 9141030982, 9964280734

Know More

Sri Rama P.U. College – 9141030981, 9449579959

Know More

Sri Rama High School – 914030980, 9482189419

Know More

Sri Rama Primary School – 9141030979, 9964282456

Know More

Sri Rama Shishu Mandira – 9141030978

Know More

Contribute

Your donation will help us accomplish our mission of ensuring for child education and happy childhoods for underprivileged children across Karnataka.

Contribute Now