• 08255 – 275073
  • info@shriramakalladka.in

ಶ್ರೀರಾಮ ಶಿಶುವಾಟಿಕ ನೂತನ ತರಗತಿಗಳ ಉದ್ಘಾಟನೆ, ಪ್ರವೇಶೋತ್ಸವ ಕಾರ್ಯಕ್ರಮ

ಶ್ರೀರಾಮ ಶಿಶುವಾಟಿಕ ನೂತನ ತರಗತಿಗಳ ಉದ್ಘಾಟನೆ ಕಾರ್ಯಕ್ರಮ
ದಿನಾಂಕ 12/06/2026 ರಂದು ಶ್ರೀರಾಮ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ “ಶ್ರೀರಾಮ ಶಿಶುವಾಟಿಕ” ವಿಭಾಗ ಮತ್ತು ಅದರ ನೂತನ ತರಗತಿಗಳ ಉದ್ಘಾಟನೆಯನ್ನು ಡಾ.ಆರ್. ಕೆ. ಶೆಟ್ಟಿ, ಮುಂಬೈ ಮಾಡಿದರು . ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾ ಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಪ್ರವೇಶೋತ್ಸವ ಕಾರ್ಯಕ್ರಮ
ದಿನಾಂಕ : 12/06/2026 ರಂದು ಶ್ರೀರಾಮ ಇಂಗ್ಲಿಷ್ ಮೀಡಿಯಂ ಸ್ಕೂಲಿನಲ್ಲಿ 2026 -27ನೇ ಶೈಕ್ಷಣಿಕ ವರ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮವು ಶಂಕರಾಚಾರ್ಯ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮಕ್ಕೆ ಗಣ್ಯರು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು. ಶ್ರೀರಾಮ ವಿದ್ಯಾ ಕೇಂದ್ರದ ಸಂಸ್ಥಾಪಕರು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ,”ಶ್ರೇಷ್ಠತೆಯ ಕಡೆಗೆ ನಡೆಯಬೇಕಾದರೆ ಹಿರಿಯರ ಕೊಡುಗೆಯನ್ನು ಸ್ಮರಿಸಿ. ಮಕ್ಕಳು ಅದನ್ನುಬೆಳೆಸಿಕೊಂಡು ಬರಬೇಕು “ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ISSAR ಫೈನಾನ್ಸಿಯಲ್ ಸರ್ವಿಸಸ್ ಮುಂಬೈ, ಇದರ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ. ಆರ್ ಕೆ .ಶೆಟ್ಟಿ ಮಾತನಾಡುತ್ತಾ “ನಮ್ಮ ಭಾಷೆ ಕಲೆ ಸಂಸ್ಕೃತಿಯನ್ನು ಕಲಿತರೆ ದೇಶ ಪ್ರಗತಿಯಾಗುತ್ತದೆ “ಎಂದರು. ಪ್ರಗತಿ ಹಾಸ್ಪಿಟಲ್ ಪುತ್ತೂರು ಇಲ್ಲಿನ ಆಯುರ್ವೇದ ತಜ್ಞರಾದ ಡಾ. ಸುಧಾ ರಾವ್ ಬಂಗಾರಡ್ಕ ಮಾತನಾಡಿ ” ಸ್ಪರ್ಧಾತ್ಮಕ ಯುಗದಲ್ಲಿ ನಮ್ಮೊಂದಿಗೆ ಎಲ್ಲರನ್ನೂ ಕರೆದುಕೊಂಡು ಹೋಗುವ ಮಾನವೀಯತೆ ನಮ್ಮಲ್ಲಿರಬೇಕು. ಎಂದರು. ಕಾರ್ಯಕ್ರಮದಲ್ಲಿ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಪುತ್ತೂರು ಇದರ ಆಡಳಿತ ಪಾಲುದಾರರಾದ ಶ್ರೀ ಲಕ್ಷ್ಮಿಕಾಂತ್ ಆಚಾರ್ಯ ಮತ್ತು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಇದರ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಶ್ರೀಮತಿ ವೇದಲಕ್ಷ್ಮಿ ಕಾಂತ್ ಆಚಾರ್ಯ, ಹಾಗೂ ರೈಸ್ ಸ್ಪೈಸಸ್ ಮಂಗಳೂರು ಇದರ ಮಾಲಕರಾದ ಶ್ರೀಮತಿ ದಿವ್ಯ ಸೋಹನ್ ರೈ, ಮತ್ತು ರಾಜ್ ಗ್ರೂಪ್ ಉಪ್ಪಿನಂಗಡಿ ಇದರ ಸಂಸ್ಥಾಪಕರಾದ ಶ್ರೀ ಕೃಷ್ಣ ರಾಜ್ , ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷರಾದ ಶ್ರೀಬಿ .ನಾರಾಯಣ ಸ್ವಾಮಿಯ ಜಿ, ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ ಶ್ರೀಮಾನ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ ಶ್ರೀ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಹಾಗೂ ಮತ್ತು ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀ ತಿರುಮಲೇಶ್ವರ ಪ್ರಶಾಂತ್ ಶ್ರೀಮಾನ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹತ್ತನೇ ತರಗತಿಯ ಕು. ಸೃಜನ ನಿರೂಪಿಸಿ , ವೈಷ್ಣವಿ ಕಡ್ಯ ಸ್ವಾಗತಿಸಿ , ವೈಷ್ಣವಿ ಕಾಮತ್ ವಂದಿಸಿದಳು ಕಾರ್ಯಕ್ರಮವು ಶಾಂತಿಮಂತ್ರದೊಂದಿಗೆ ಕೊನೆಗೊಂಡಿತು.

Institutions

SRI RAMA ENGLISH MEDIUM SCHOOL KALLADKA

Know More

Sri Rama Vidyakendra Trust (R.)

Know More

Sri Rama Degree College – 9141030982, 9964280734

Know More

Sri Rama P.U. College – 9141030981, 9449579959

Know More

Sri Rama High School – 914030980, 9482189419

Know More

Sri Rama Primary School – 9141030979, 9964282456

Know More

Sri Rama Shishu Mandira – 9141030978

Know More

Contribute

Your donation will help us accomplish our mission of ensuring for child education and happy childhoods for underprivileged children across Karnataka.

Contribute Now