ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಶ್ರೀ ಗುರೂಜಿ ಸಂಸ್ಮರಣೆ 16.2.2023
ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಗುರೂಜಿಯವರ ಜನ್ಮದಿನಾಚರಣೆಯನ್ನು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಆಚರಿಸಲಾಯಿತು. ಕಾರ್‍ಯಕ್ರಮದ ಪ್ರಾರಂಭದಲ್ಲಿ ಶಿಶುಮಂದಿರ ಹಾಗೂ ಪೂರ್ವಗುರುಕುಲದ ೧ ಮತ್ತು ೨ನೇ ತರಗತಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ಪ್ರತಿಭಾ ಪ್ರದರ್ಶನ ನಡೆಯಿತು.
ಮುಖ್ಯ ಅತಿಥಿಯಾಗಿ ಟಿ.ಬಿ.ಎ ಕೆಂಬ್ರಿಡ್ಜ್ ಇಂಟರ್‌ನ್ಯಾಶನಲ್ ಸ್ಕೂಲ್, ಮಂಗಳೂರು ಇದರ ಪ್ರಾಂಶುಪಾಲರಾದ ಶ್ರೀಮತಿ ಸುರೇಖಾ ಎಂ.ಹೆಚ್ ಇವರು ಭಾರತಮಾತೆ ಹಾಗೂ ಶ್ರೀಗುರೂಜಿ ಭಾವಚಿತ್ರದ ಮುಂಭಾಗದಲ್ಲಿ ದೀಪ ಬೆಳಗಿಸಿ ಕಾರ್‍ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ ಕಾರ್‍ಯಕ್ರಮದಲ್ಲಿ ಪುಟಾಣಿ ವಿದ್ಯಾರ್ಥಿಗಳು ಮಾಡಿದ ಸಾಂಸ್ಕೃತಿಕ ಕಾರ್‍ಯಕ್ರಮ ಮತ್ತು ಇಲ್ಲಿನ ಚಟುವಟಿಕೆ ಆಧಾರಿತ ಸಂಸ್ಕಾರಯುತ ಶಿಕ್ಷಣದ ಬಗ್ಗೆ ಕಂಡು ತುಂಬಾ ಸಂತೋಷವಾಯಿತು ಎಂದರು. ಪ್ರೌಢಶಾಲಾ ಶಿಕ್ಷಕಿ ಸೌಮ್ಯ ಶ್ರೀಗುರೂಜಿಯವರ ಜೀವನದ ಬಗ್ಗೆ ಕಾರ್‍ಯಕ್ರಮ ಉದ್ದೇಶಿಸಿ ಮಾತಾನಾಡಿದರು.
ಸಾಮರಸ್ಯ – ಸಹಭೋಜನ : ಕಾರ್‍ಯಕ್ರಮದ ವಿಶೇಷ ಸಾಮರಸ್ಯ ದಿನ – ಸಹಭೋಜನ. ೧೮೦ ಮನೆಗಳಿಂದ ಅನ್ನ, ೯೮ ಮನೆಗಳಿಂದ ಪಾಯಸ, ೧೨೫ ಮನೆಗಳಿಂದ ಪಲ್ಯ, ೫೩೫ಮನೆಗಳಿಂದ ಕೊಬ್ಬರಿ ಮೀಠಾಯಿ ಹಾಗೂ ಬಾಳೆಎಲೆಗಳನ್ನು ವಿದ್ಯಾಕೇಂದ್ರದ ಪೋಷಕರು ತಮ್ಮ ತಮ್ಮ ಮನೆಗಳಿಂದ ತಂದಿರುವುದು ವಿಶೇಷವಾಗಿದೆ. ತಂದಿರುವ ಪದಾರ್ಥಗಳನ್ನು ಅನ್ನವನ್ನು ಒಂದು ಪಾತ್ರೆಯಲ್ಲಿ ಅದೇ ರೀತಿಯಲ್ಲಿ ಪಾಯಸ, ಪಲ್ಯ ಇವುಗಳನ್ನು ಪತ್ಯೇಕ ಪಾತ್ರೆಯಲ್ಲಿ ಒಟ್ಟಿಗೆ ಹಾಕಲಾಯಿತು. ಕಾರ್‍ಯಕ್ರಮದ ಕೊನೆಯಲ್ಲಿ ಬಂದಿರುವ ಅತಿಥಿಗಳು, ಆಡಳಿತ ಮಂಡಳಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಎಲ್ಲರೂ ಒಟ್ಟಾಗಿ ಕುಳಿತು ಮನೆಗಳಿಂದ ತಂದಿರುವ ಭೋಜನವನ್ನು ಸ್ವೀಕರಿಸಿದರು.
ಶಿಶುಮಂದಿರದ ಸಾಂಸ್ಕೃತಿಕ ಕಾರ್‍ಯಕ್ರಮವನ್ನು ಶಿಶುಮಂದಿರದ ಪುಟಾಣಿಗಳಾದ ಆದ್ಯ, ರಾಮಸ್ಕಂದ, ದಿಶ, ಜಶ್ವಿತ್ ಹಾಗೂ ಪ್ರಾಥಮಿಕ ಶಾಲೆಯ ಸಾಂಸ್ಕೃತಿಕ ಕಾರ್‍ಯಕ್ರಮವನ್ನು ವೇದಿಕಾ ಆರ್ ಕುಂಬಳೆ ನಿರ್ವಹಿಸಿದರು. ಸಭಾಕಾರ್‍ಯಕ್ರಮದಲ್ಲಿ ಗಣ್ಯರನ್ನು ಶಿಶುಮಂದಿರದ ಪುಟಾಣಿಗಳಾದ ಸಾಗರ್ ಸ್ವಾಗತಿಸಿ, ಗೌರಿನಂದಿನಿ ಧನ್ಯವಾದಗೈದು, ಪೋಷಕರಾದ ನವ್ಯ ಮತ್ತು ಶುಭ ನಿರ್ವಹಿಸಿದರು.