News & Events
ದಾದಿಯರೊಂದಿಗೆ ರಕ್ಷಾಬಂಧನ
ದಿನಾಂಕ 30.08.2023ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ದಾದಿಯರೊಂದಿಗೆ ಆಚರಿಸಲಾಯಿತು. ರಕ್ಷಾಬಂದನ ಎಂಬುದರ ತಾತ್ಪರ್ಯವೇನೆಂದರೆ ಪ್ರೀತಿಯ ಭಾವದಿಂದ ತನ್ನ ರಕ್ಷಣೆಯ ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಳ್ಳುವುದು ಎಂದು ಹೇಳಬಹುದು. ಮನುಷ್ಯನು ತನ್ನ ಬದುಕಿನಲ್ಲಿ ಹಲವಾರು ವಸ್ತುಗಳ, ಸಂಬಂಧಗಳ ರಕ್ಷಣೆ ಮಾಡಬೇಕು. ಅದು ಹೆಚ್ಚಾಗಿ ಸ್ತ್ರೀ ಸಂಬಂಧಿತವಾದದ್ದು ಎನ್ನುವುದು ವಿಶೇಷ. ಇದರ ತಾತ್ಪರ್ಯವೇನೆಂದರೆ, ಸ್ತ್ರೀಯರು ಅಬಲರು ಎಂದಲ್ಲ, ಅವರ ರಕ್ಷಣೆ ನಮ್ಮ ಕರ್ತವ್ಯವೆಂದು. ಆದ್ದರಿಂದ ಪುರುಷನು ಭೂಮಿಯನ್ನು ತಾಯಿ ಎಂಬ ಭಾವದಿಂದ, ವಿದ್ಯೆಯನ್ನು
ದೀಪಪ್ರದಾನ 29.03.2023
29.03.2023 ರಂದು ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ 7ನೇ ತರಗತಿಯ ದೀಪಪ್ರದಾನ ಕಾರ್ಯಕ್ರಮ ಬೆಂಗಳೂರು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಮಾತಾನಾಡುತ್ತಾ, ನಾನು ವಿದ್ಯಾಸಂಸ್ಥೆಯ ಆವರಣದಲ್ಲಿ ಕಳೆದ ಅಷ್ಟು ಸಮಯ ನನ್ನಷ್ಟಕ್ಕೆ ನಾನು ಅಂತರ್ಮುಖಿಯಾಗಿದ್ದೇನೆ. ಪತ್ರಕಾರನಾಗಿರುವ ನಾನು ಯಾವುದದರೂ ತಪ್ಪು ಸಿಗುತ್ತದೆಯೋ ಎಂದು ಹುಡುಕುತ್ತಿದ್ದಾಗ ನನಗೆ ತೃಣಮಾತ್ರದಷ್ಟು ತಪ್ಪು ಸಿಗಲಿಲ್ಲ. ಸಣ್ಣ ಸಣ್ಣ ಸಂಗತಿಗಳು ನಮ್ಮ ಜೀವನವನ್ನು ಸುಧಾರಿಸುತ್ತದೆ. ಸಾಧ್ಯವಾದರೆ ಆ ಸಣ್ಣ ಸಂಗತಿಗಳು ಜಗತ್ತನ್ನೆ